ಗುರುವಾರ , ಏಪ್ರಿಲ್ 2, 2020
19 °C

ನಿರಂತರ ಸೆಕ್ಸ್‌ ಮಾಡಿದರೆ ಕೋವಿಡ್‌–19 ಬರಲ್ಲ: ಶ್ರೀರೆಡ್ಡಿಗೆ ನೆಟ್ಟಿಗರ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ದಕ್ಷಿಣ ಭಾರತದಲ್ಲಿ ಪಾತ್ರಕ್ಕಾಗಿ ಪಲ್ಲಂಗ ಪ್ರಕರಣದ ಮೂಲಕ ಸದ್ದು ಮಾಡಿದ್ದ ತೆಲುಗು ನಟಿ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಳ್ಳುವ ಮೂಲಕ ನೆಟ್ಟಿಗರ ಹಿಗ್ಗಾ ಮುಗ್ಗಾ ಟ್ರೋಲ್‌ಗಳಿಗೆ ಗುರಿಯಾಗಿದ್ದಾರೆ.

ದೇಶದಲ್ಲಿ ಕೊರೊನಾ ಮಹಾಮಾರಿಗೆ ಇಡೀ ದೇಶವೇ ಲಾಕ್‌ಡೌನ್‌ ಆಗುವ ಭಿತೀಯಲ್ಲಿದೆ. ಈಗಾಗಲೇ ಕೆಲವು ರಾಜ್ಯಗಳು ಸಂಪೂರ್ಣವಾಗಿ ಸ್ತಬ್ಧ ಗೊಂಡಿವೆ. ಪರಿಸ್ಥಿತಿ ಈ ರೀತಿ ಇರುವಾಗ  ಶ್ರೀರೆಡ್ಡಿ ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ 
ನಿರಂತರ ಸೆಕ್ಸ್‌ ಮಾಡುವುದರಿಂದ ಕೊರೋನಾ ವೈರಸ್‌ ದೂರ ಮಾಡಬಹುದು, ಇದು ಸಾಬೀತಾಗಿದೆ (Constant sex kills corona virus, its proved) ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ನೆಟ್ಟಿಗರು ಶ್ರೀರೆಡ್ಡಿಯವರನ್ನು ಫುಲ್ ಕ್ಲಾಸ್‌ ತೆಗದುಕೊಂಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಶ್ರೀರೆಡ್ಡಿ ಈ ಪೋಸ್ಟ್ ಮಾಡಿದ್ದರು. ಇದಕ್ಕೆ ಸಾವಿರಾರು ಜನರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಕೆಲವರಂತೂ ನೀವು ಈ ಅನುಭವವನ್ನು ಮಾಡಿಕೊಂಡಿದ್ದೀರಾ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು,  ಶ್ರೀರೆಡ್ಡಿ ಕೊರೊನಾ ವೈರಸ್‍ಗೆ ಸ್ಪೆಷಲ್ ವೈದ್ಯೆಯಾಗಿದ್ದಾರೆ ಎಂದು ಬರೆದಿದ್ದಾರೆ. 

 
 
 
 

 
 
 
 
 
 
 
 
 
 
 

A post shared by Sri Reddy Mallidi (@srireddymallidi) on

ಈಗಾಗಲೇ ಹೈದರಾಬಾದ್‌ ಪೊಲೀಸರು ಶ್ರೀರೆಡ್ಡಿ ವಿರುದ್ಧ ದೂರು ದಾಖಲಿಸಿದ್ದಾರೆ. ಆ ಪೋಸ್ಟ್ ಅನ್ನು ಶ್ರೀರೆಡ್ಡಿ ಡಿಲೀಟ್‌ ಮಾಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Sri Reddy Mallidi (@srireddymallidi) on

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು