ಬೆಳಗ್ಗೆ 6–7 ಗಂಟೆಗೆ ಸಿನಿಮಾ ಶೋಗಳನ್ನು ಕೇವಲ ಸ್ಟಾರ್‌ಗಳ ಸಿನಿಮಾಗಳಿಗೆ ನೋಡಿದ್ದೆ. ಆದರೆ ಹೊಸಬರ ಸಿನಿಮಾದ ಬೆಳಗಿನ ಜಾವದ ಶೋಗಳೂ ಹೌಸ್‌ಫುಲ್ ಆಗಿದ್ದವು ಎನ್ನುವುದೇ ಖುಷಿ. ಜನರಿಂದ ಇದು ಸಾಧ್ಯವಾಗಿದೆ. ಬೇಡಿಕೆಗೆ ತಕ್ಕಂತೆ ಶೋಗಳನ್ನು ಹೇಗೆ ಹೆಚ್ಚಿಸಬೇಕು ಎನ್ನುವುದು ಗೊತ್ತಾಗುತ್ತಿಲ್ಲ.
– ರಾಜ್ ಬಿ.ಶೆಟ್ಟಿ, ನಟ
ಈ ಚಿತ್ರವು ನನ್ನನ್ನು ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ದಿನಗಳಿಗೆ ಕರೆದುಕೊಂಡು ಹೋಯಿತು. ಆ ಚಿತ್ರದಲ್ಲಿ ನಟಿಸಿದ್ದ ಅನೇಕ ಕಲಾವಿದರು ‘ಸು ಫ್ರಮ್ ಸೋ’ದಲ್ಲಿಯೂ ಇರುವುದು ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡಿತು.