ಜನ್ಮದಿನ ಸಿಂಪಲ್ ಆಚರಣೆಗೆ ಕಿಚ್ಚ ನಿರ್ಧಾರ

ಸ್ಯಾಂಡಲ್‌ವುಡ್‌ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ಗೆ ನಾಳೆ (ಬುಧವಾರ) ಜನ್ಮದಿನದ ಸಂಭ್ರಮ. ಅವರ ಅಭಿಮಾನಿಗಳು ಮತ್ತು ಸ್ನೇಹಿತರು ಕಿಚ್ಚನ ಹುಟ್ಟುಹಬ್ಬವನ್ನು ಸಂಭ್ರಮಿಸಲು ಸಜ್ಜಾಗಿದ್ದಾರೆ. ಜತೆಗೆ ಕಿಚ್ಚ ನಟಿಸುತ್ತಿರುವ ಚಿತ್ರಗಳ ತಂಡಗಳು, ಕಿಚ್ಚನ ಹುಟ್ಟುಹಬ್ಬದ ನೆನಪಿನ ಕಾಣಿಕೆ ನೀಡಲು ಸಜ್ಜಾಗಿವೆ. ಆದರೆ, ಕೊರೊನಾ ಆರ್ಭಟ ತಣ್ಣಗಾಗದಿರುವ ಕಾರಣಕ್ಕೆ ಅದ್ಧೂರಿ ಹುಟ್ಟುಹಬ್ಬ ಆಚರಣೆಯನ್ನು ಕಿಚ್ಚ ಕೈಬಿಟ್ಟಿದ್ದಾರೆ. ಈ ಕಾರಣಕ್ಕೆ ‘ಸಣ್ಣದೊಂದು ಮನವಿ’ ಎಂದು ಟ್ವೀಟ್ ಮಾಡಿರುವ ಅವರು, ಕೋವಿಡ್- 19 ಅಟ್ಟಹಾಸ ಮುಂದುವರೆದಿರುವುದರಿಂದ ಈ ಬಾರಿಯ ಹುಟ್ಟುಹಬ್ಬದ ಸಂಭ್ರಮಕ್ಕೆ ಬ್ರೇಕ್ ಹಾಕಿರುವೆ.
ಸ್ನೇಹಿತರಾದ ನಿಮಗೆಲ್ಲಾ ಒಂದು ಸಣ್ಣ ಮನವಿ pic.twitter.com/NKrJ1rGiCV
— Kichcha Sudeepa (@KicchaSudeep) August 31, 2020
‘ಸ್ನೇಹಿತರಾದ ನಿಮಗೆಲ್ಲ ಒಂದು ಮನವಿ’ ಎಂಬ ಒಕ್ಕಣೆಯೊಂದಿಗೆ ಟ್ವೀಟ್ ಆರಂಭಿಸಿರುವ ಅವರು, ನಾವೆಲ್ಲರೂ ಕೋವಿಡ್ –19 ವಿರುದ್ಧ ಹೋರಾಡುತ್ತಿದ್ದೇವೆ. ಇನ್ನೂ ಹೋರಾಡ ಬೇಕಾಗಿದೆ. ಇಂತಹ ಸಮಯದಲ್ಲಿ ಜನರನ್ನು ಒಟ್ಟುಗೂಡಿಸುವುದು ಎಂದರೆ ಹತ್ತು ಹೆಜ್ಜೆ ಹಿಂದೆ ಇಟ್ಟಂತೆ! ಆದುದರಿಂದ ಈ ಸಮಯದಲ್ಲಿ ಸಂಭ್ರಮಿಸುವುದು ಬೇಡ. ‘ನಿಮ್ಮ ಫ್ಯಾಮಿಲಿ, ನನ್ನ ಫ್ಯಾಮಿಲಿಯಂತೆ’. ‘ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಮನೆ ಬಳಿ ಯಾರೂ ಬರಬೇಡಿ. ಯಾವುದಾದರೂ ರೀತಿಯಲ್ಲಿ ನಿಮ್ಮ ಸುತ್ತಮುತ್ತಲಿನ ಜನರಿಗೆ ಸಹಾಯ ಮಾಡಿ’ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
‘ಅದೇ ರೀತಿಯಲ್ಲಿ ನಿಮ್ಮ ಭೇಟಿಗಾಗಿ ನನ್ನ ಮನಸ್ಸು ಯಾವಾಗಲೂ ಖಂಡಿತ ತುಡಿಯುತ್ತಿರುತ್ತದೆ. ನಿಮ್ಮ ಭೇಟಿಗಿಂತ ಹರ್ಷ ಬೇರೊಂದಿಲ್ಲ. ಆದರೆ ಈ ಬಾರಿ ಆಚರಣೆ ಬೇಡ’ ಎಂದು ಅಭಿಮಾನಿಗಳ ಮುಂದೆ ವಿನಮ್ರ ಕೋರಿಕೆ ಇಟ್ಟಿದ್ದಾರೆ.
‘ಈ ಅನೇಕ ವರ್ಷಗಳು ನೀವು ನನ್ನ ಪರ ನಿಂತಿದ್ದಕ್ಕೆ ನಿಮಗೆಲ್ಲರಿಗೂ ಧನ್ಯವಾದಗಳು. ಒಂದೊಂದು ಸಲ ನಾನು ನಿಮ್ಮ ನಿರೀಕ್ಷೆಗಳಿಗೆ ಇರಲಿಲ್ಲ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಇರಲು ಖಂಡಿತ ಪ್ರಯತ್ನಿಸುವೆ. ನಿಮ್ಮನ್ನೆಲ್ಲ ರಂಜಿಸಲು ಮತ್ತು ಕೋವಿಡ್ –19 ಯುದ್ಧದ ನಂತರ ನಿಮ್ಮೊಂದಿಗೆ ಹೆಚ್ಚು ಇರಲು ಪ್ರಯತ್ನಿಸುವೆ’ ಎಂದು ಅಭಿಮಾನಿಗಳಿಗೆ ಅವರು ಟ್ವಿಟರ್‌ನಲ್ಲಿ ಪತ್ರ ಬರೆದಿದ್ದಾರೆ.
ಸದ್ಯ ಸುದೀಪ್ ‘ಕೋಟಿಗೊಬ್ಬ3, ‘ಫ್ಯಾಂಟಮ್’ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಕಿಚ್ಚನ ಹುಟ್ಟುಹಬ್ಬದ ನಿಮಿತ್ತ ‘ಕೋಟಿಗೊಬ್ಬ 3’ ಸಿನಿಮಾದ ಟೀಸರ್ ಅನ್ನು ಸೆ.2ರಂದು ಚಿತ್ರತಂಡ ಬಿಡುಗಡೆ ಮಾಡಿ, ಕಿಚ್ಚನ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್ ನೀಡಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.