ಬುಧವಾರ, ಜನವರಿ 22, 2020
23 °C

ತಲೈವಾ ರಜನಿಕಾಂತ್‌ಗೆ 69ನೇ ಜನ್ಮದಿನದ ಸಂಭ್ರಮ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ದಕ್ಷಿಣ ಭಾರತದ ಸೂಪರ್ ಸ್ಟಾರ್, ಹಿರಿಯ ನಟ ರಜನಿಕಾಂತ್ ಇಂದು 69ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ತಮ್ಮ ವಿಶಿಷ್ಟ ಮ್ಯಾನರಿಸಂನಿಂದ ದೇಶ ವಿದೇಶದಲ್ಲಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನು ಪಡೆದಿರುವ ರಜನಿ, ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ.

ಅಭಿಮಾನಿಗಳ ಜತೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಖುಷಿ ಒಂದೆಡೆಯಾದರೆ, ಅಭಿಮಾನಿಗಳಿಗೆ ತಮ್ಮೊಳಗಿನ ಅಭಿಮಾನವನ್ನು ವ್ಯಕ್ತಪಡಿಸುವ ಪುಳಕ. ಹಾಗಾಗಿ ರಜನಿ ಅಭಿಮಾನಿಗಳು ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದಾರೆ.

ತಮಿಳುನಾಡಿನಲ್ಲಿ ಸಾವಿರಾರು ಚಿತ್ರಮಂದಿರಗಳಲ್ಲಿ ಅವರ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ. ದೇವಾಲಯಗಳಲ್ಲಿ ರಜನಿ ಹೆಸರಿನಲ್ಲಿ ಅಭಿಮಾನಿಗಳು ವಿಶೇಷ ಪೂಜೆಗಳನ್ನು ಮಾಡುತ್ತಿದ್ದಾರೆ. ಕೆಲವು ಕಡೆ ಅನ್ನಸಂತರ್ಪಣೆ, ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಹಾಲು, ಹಣ್ಣು ವಿತರಣೆ ಹಾಗೂ ರಕ್ತದಾನ ಶಿಬಿರಗಳನ್ನು ಆಯೋಜಿಸಿ ಅರ್ಥಪೂರ್ಣವಾಗಿ ರಜನಿ ಜನ್ಮದಿನ ಆಚರಿಸಲಾಗುತ್ತಿದೆ.

ರಜನಿಕಾಂತ್‌ ಅವರ 167ನೇ ಸಿನಿಮಾ ‘ದರ್ಬಾರ್‌’ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರವನ್ನು ಎ.ಆರ್‌. ಮುರುಗದಾಸ್‌ ನಿರ್ದೇಶನ ಮಾಡಿದ್ದಾರೆ. ಇದು ಸಂಕ್ರಾಂತಿಗೆ ತೆರೆಕಾಣುವ ಸಾಧ್ಯತೆಗಳಿವೆ. ಈ ನಡುವೆ ಸನ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ 168ನೇ ಚಿತ್ರದಲ್ಲಿ ನಟಿಸಲು ರಜನಿ ಒಪ್ಪಿಕೊಂಡಿದ್ದಾರೆ. ಹೊಸ ಚಿತ್ರವನ್ನು ಸಿ ರುತೈ ಶಿವ ನಿರ್ದೇಶನ ಮಾಡಲಿದ್ದಾರೆ. ಇದೇ ಚಿತ್ರತಂಡದೊಂದಿಗೆ ಈ ಬಾರಿ ರಜನಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ವಿಶೇಷ. 

ರಜನಿಯ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಸಿನಿಮಾರಂಗದ ಗಣ್ಯರು, ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಅಭಿಮಾನಿಗಳು ರಜನಿಕಾಂತ್‌ ಅವರಿಗೆ ಶುಭಾಶಯಗಳನ್ನು ಕೋರುತ್ತಿದ್ದಾರೆ.

'ಆರೋಗ್ಯ ಮತ್ತು ಯಶಸ್ಸು ದೊರೆಯಲಿ' ಎಂದು ನಟ ಕಮಲ ಹಾಸನ್ ಟ್ವೀಟ್‌ ಮಾಡಿ ಶುಭ ಹಾರೈಸಿದ್ದಾರೆ. 

 
 
 
 

 
 
 
 
 
 
 
 
 

Will follow forever ... just to see that smile .. happy birthday Appa!

A post shared by Aishwaryaa R Dhanush (@aishwaryaa_r_dhanush) on

'ನಾವು ಸದಾ ನಿಮ್ಮ ನಡೆಯನ್ನು ಅನುಸರಿಸುತ್ತೇವೆ, ನಿಮ್ಮ ತುಂಬಿದ ನಗುವ ನೋಡಲು’  ಜನ್ಮದಿನದ ಶುಭಾಶಯಗಳು ಅಪ್ಪ ಎಂದು ಮಗಳು ಐಶ್ವರ್ಯ ಟ್ವೀಟ್‌ ಮಾಡಿದ್ದಾರೆ.

ತಮಿಳುನಾಡು ರಾಜಕಾರಣಕ್ಕೆ ಎಂಟ್ರಿಯಾಗುವ ಸೂಚನೆ ನೀಡಿರುವ ರಜನಿ, ಕಮಲ ಹಾಸನ್ ಜೊತೆಗೂಡಿ ರಾಜಕೀಯ ರಂಗ ರೂಪಿಸುವ ಸಾಧ್ಯತೆಗಳಿವೆ. ಈಗಾಗಲೇ ಈ ಬಗ್ಗೆ ಸುಳಿವು ನೀಡಿರುವ ರಜನಿ 2021ರ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುವುದು ಸ್ಪಷ್ಟವಾಗಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು