ಪ್ರೇಮಕಥೆಯನ್ನು ಹೊಂದಿರುವ ‘ಸೂರ್ಯ’ ಚಿತ್ರದ ‘ಕೆಂಪಾನ ಗಲ್ಲದ ಹುಡುಗಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಸಾಗರ್ ದಾಸ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

‘ಯುವಕನೊಬ್ಬ ತನ್ನ ಪ್ರೀತಿಯನ್ನು ಪಡೆದುಕೊಳ್ಳಲು ಏನೆಲ್ಲ ಹೋರಾಟ, ಸಾಹಸ ಮಾಡುತ್ತಾನೆ ಎಂಬುದೇ ಚಿತ್ರಕಥೆ. ಇದೊಂದು ಮಾಸ್ ಲವ್ಸ್ಟೋರಿ. ಸೂರ್ಯ ನಾಯಕನ ಹೆಸರು. ಬೆಂಗಳೂರು ಸುತ್ತಮುತ್ತ ಹಾಗೂ ಪುಣೆಯಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಚಿತ್ರದಲ್ಲಿ ಒಂದು ಉತ್ತರ ಕರ್ನಾಟಕ ಶೈಲಿಯ ಹಾಡು ಮಾಡಬೇಕು ಅಂದುಕೊಂಡಾಗ ಈ ಹಾಡು ಸಿದ್ಧವಾಯಿತು. ಜೂನ್ ಅಥವಾ ಜುಲೈನಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ’ ಎಂದರು.

ಈ ಗೀತೆಗೆ ರವೀಂದ್ರ ಸೊರಗಾವಿ, ಸ್ಫೂರ್ತಿ ಧ್ವನಿಯಾಗಿದ್ದಾರೆ. ಶ್ರೀಶ ಸಾಸ್ತಾ ಸಂಗೀತ ನಿರ್ದೇಶನವಿದೆ. ಐದು ಹಾಡುಗಳಿದ್ದು, ಬಹದ್ದೂರ್ ಚೇತನ್, ಯೋಗರಾಜ್ ಭಟ್ ಮುಂತಾದವರ ಸಾಹಿತ್ಯವಿದೆ. ಮನುರಾಜ್ ಛಾಯಾಚಿತ್ರಗ್ರಹಣವಿದೆ. ಬೆಳಗಾವಿ ಮೂಲದ ಬಸವರಾಜ ಬೆಣ್ಣೆ ಹಾಗೂ ರವಿ ಬೆಣ್ಣೆ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಯುವನಟ ಪ್ರಶಾಂತ್ಗೆ ಹರ್ಷಿತಾ ಜೋಡಿಯಾಗಿದ್ದಾರೆ. ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಭಜರಂಗಿ ಪ್ರಸನ್ನ, ಆರ್ಮುಗಂ ರವಿಶಂಕರ್, ಶ್ರುತಿ, ಪ್ರಮೋದ್ ಶೆಟ್ಟಿ ಮುಂತಾದವರು ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.