ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಸುಶ್ಮಿತಾ ಸೇನ್

7

ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ಸುಶ್ಮಿತಾ ಸೇನ್

Published:
Updated:
Deccan Herald

ಕೆಲ ವರ್ಷಗಳಿಂದ ಬೆಳ್ಳಿತೆರೆಯಿಂದ ದೂರವುಳಿದಿದ್ದ ನಟಿ ಸುಶ್ಮಿತಾ ಸೇನ್‌ ಹೊಸ ಅವತಾರದಲ್ಲಿ ಬಾಲಿವುಡ್‌ಗೆ ಶೀಘ್ರದಲ್ಲೇ ಪ್ರವೇಶಿಸಲಿದ್ದಾರೆ. ಈ ಹಿಂದೆ ‘ನೋ ಪ್ರಾಬ್ಲಂ’ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿಯಾಗಿ ಹಾಸ್ಯ ಪಾತ್ರದಲ್ಲಿ ನಟಿಸಿದ್ದ ಅವರು, ‘ಸಮಯ್‌’ ಚಿತ್ರದಲ್ಲಿಯೂ ಎಸ್‌ಪಿ ಪಾತ್ರವನ್ನು ನಿರ್ವಹಿಸಿದ್ದರು. ಈಗ ಮತ್ತೊಮ್ಮೆ ಪೊಲೀಸ್‌ ಅಧಿಕಾರಿಯಾಗಿ ಹೊಸ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಚಿತ್ರದ ಹೆಸರನ್ನು ಇನ್ನು ಬಹಿರಂಗಪಡಿಸಿಲ್ಲ. 

ಈ ಸಿನಿಮಾ ಮಧ್ಯಪ್ರದೇಶದಲ್ಲಿ ನಡೆದ ಅಪರಾಧ ಘಟನೆಯ ಎಳೆಯನ್ನು ಹೊಂದಿದೆ. ಇದರಲ್ಲಿ ಸಣ್ಣ ಪಟ್ಟಣದ ಪೊಲೀಸ್‌ ಅಧಿಕಾರಿಯಾಗಿ ಸುಶ್ಮಿತಾ ನಟಿಸಲಿದ್ದಾರೆ.

ಈಚೆಗೆ ಈ ಸಿನಿಮಾಕ್ಕೆ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಹೊಸ ನಿರ್ದೇಶಕರೊಬ್ಬರು ನಿರ್ದೇಶಿಸಲಿದ್ದು, ಇದಕ್ಕೆ ಕೆಲವು ಅಂಶಗಳನ್ನು ಸೇರಿಸುವಂತೆ ಸುಶ್ಮಿತಾ ಅವರೇ ಸಲಹೆ ನೀಡಿದ್ದಾರಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !