ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸಾನೆ ಖಾನ್ ಮಂಗಳವಾರ ಕೋವಿಡ್-19 ಲಸಿಕೆಯ ಎರಡನೇ ಡೋಸ್ ಅನ್ನು ಪಡೆದಿದ್ದಾರೆ. ಸುಸಾನೆ ಒಬ್ಬರೇ ಲಸಿಕೆ ಪಡೆದಿಲ್ಲ ಬದಲಿಗೆ ತಮ್ಮ ಇಂಟೀರಿಯರ್ ಡಿಸೈನ್‌ನ ದಿ ಚಾರ್‌ಕೋಲ್ ಪ್ರಾಜೆಕ್ಟ್‌ನ ತನ್ನ ತಂಡದೊಂದಿಗೆ ಲಸಿಕೆ ಪಡೆದಿರುವುದಾಗಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದಾರೆ.

ಸುಸಾನೆ ತನ್ನ ಲಸಿಕೆಯ ಎರಡನೇ ಡೋಸ್ ಅನ್ನು ಪಡೆದರೆ, ಆಕೆಯ ತಂಡದ ಸದಸ್ಯರು ಇಂದು ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ.

ಸುಸಾನೆ ಅವರ ಪೋಸ್ಟ್‌ಗೆ ಹಲವಾರು ಮಂದಿ ಕಮೆಂಟ್ ಮಾಡಿದ್ದು, ಸುಸಾನೆ ಅವರ ಬಾಯ್‌ಫ್ರೆಂಡ್ ಎನ್ನುವ ವದಂತಿ ಕೇಳಿಬಂದಿರುವ ನಟ ಅರ್ಸ್ಲಾನ್ ಗೋನಿ ಕಮೆಂಟ್ ಮಾಡಿರುವುದು ಇದೀಗ ಹೊಸ ಚರ್ಚೆಗೆ ಗ್ರಾಸವಾಗಿದೆ. ಚಪ್ಪಾಳೆಯ ಎಮೋಜಿಗಳನ್ನು ಕಮೆಂಟ್ ಮಾಡಿದ್ದಾರೆ. ಮತ್ತೊಂದೆಡೆ, ಟಿವಿ ನಿರ್ಮಾಪಕ ಏಕ್ತಾ ಕಪೂರ್ ಕೂಡ ಕಮೆಂಟ್ ಮಾಡಿದ್ದು, ಹೃದಯದ ಎಮೋಜಿಗಳೊಂದಿಗೆ 'ಲವ್ಲಿ' ಎಂದು ಬರೆದಿದ್ದಾರೆ.

ಪ್ರತ್ಯೇಕ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ, ದಿ ಚಾರ್‌ಕೋಲ್ ಪ್ರಾಜೆಕ್ಟ್ ತಂಡದ ಗುಂಪು ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರವನ್ನು ಹಂಚಿಕೊಳ್ಳುತ್ತಾ, 'ಚಾರ್‌ಕೋಲ್ ತಂಡವು ಲಸಿಕೆಯ ಮೊದಲನೇ ಡೋಸ್ ಹಾಕಿಸಿಕೊಂಡಿದೆ... ನಮ್ಮ ದೇವತೆಗಳ ಸ್ವಲ್ಪ ಸಹಾಯದಿಂದ ನಾವೆಲ್ಲರೂ ಬದುಕಬಹುದು' ಎಂದು ಬರೆದುಕೊಂಡಿದ್ದಾರೆ.

ಸುಸಾನೆ ಖಾನ್ 2000 ರಲ್ಲಿ ನಟ ಹೃತಿಕ್ ರೋಶನ್ ಅವರನ್ನು ವಿವಾಹವಾಗಿದ್ದರು. ಅವರು 2014 ರಲ್ಲಿ ವಿಚ್ಛೇದನ ಪಡೆದರು. ಆದರೆ ವಿಚ್ಛೇದನದ ನಂತರವೂ ಅವರು ಸ್ನೇಹಿತರಾಗಿ ಉಳಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.