ಶನಿವಾರ, ಸೆಪ್ಟೆಂಬರ್ 25, 2021
22 °C

ಜಹಾಂಗೀರ್ ಅಲಿ ಖಾನ್ ಹೆಸರು ವಿರೋಧಿಸುವವರು ಕತ್ತೆಗಳು: ಸ್ವರಾ ಭಾಸ್ಕರ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಬಾಲಿವುಡ್‌ನ ಸೆಲೆಬ್ರಿಟಿ ದಂಪತಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮೊದಲ ಪುತ್ರ ತೈಮೂರ್ ಅಲಿ ಖಾನ್ ಬಳಿಕ ಎರಡನೇ ಪುತ್ರ ಜಹಾಂಗೀರ್ ಅಲಿ ಖಾನ್ ಹೆಸರೀಗ ಬಾಲಿವುಡ್ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಈ ನಡುವೆ ಸೈಫ್-ಕರೀನಾ ದಂಪತಿಗೆ ಬೆಂಬಲ ಸೂಚಿಸಿರುವ ನಟಿ ಸ್ವರಾ ಭಾಸ್ಕರ್, ಜಹಾಂಗೀರ್ ಅಲಿ ಖಾನ್ ಹೆಸರನ್ನು ವಿರೋಧಿಸುವವರು ಕತ್ತೆಗಳಿಗೆ ಸರಿ ಸಮಾನರು ಎಂದು ಹೇಳಿದ್ದಾರೆ.

ಇದನ್ನೂ ಓದಿ: 

ಈ ಕುರಿತು ಹಿಂದಿಯಲ್ಲಿ ಟ್ವೀಟ್ ಮಾಡಿರುವ ಸ್ವರಾ ಭಾಸ್ಕರ್, 'ದಂಪತಿಗಳು ತಮ್ಮ ಮಗುವಿಗೆ ಹೆಸರಿಟ್ಟಿದ್ದಾರೆ. ಆ ದಂಪತಿಗಳು ನೀವಲ್ಲ. ಆದರೆ ಹೆಸರು ಏನು ಮತ್ತು ಯಾಕೆ ಎಂಬುದರ ಬಗ್ಗೆ ನಿಮ್ಮಲ್ಲಿ ಅಭಿಪ್ರಾಯವಿದ್ದರೆ ಮತ್ತು ನಿಮ್ಮ ಮನಸ್ಸಿನ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತಿದ್ದರೆ ನೀವು ಈ ಜಗತ್ತಿನ ಅತಿ ದೊಡ್ಡ ಕತ್ತೆಗಳಲ್ಲೊಬ್ಬರು' ಎಂದು ಕಟುವಾಗಿ ಟೀಕಿಸಿದ್ದಾರೆ.

 

 

 

ಸೈಫ್-ಕರೀನಾ ದಂಪತಿಯು ಮೊದಲ ಮಗುವಿಗೆ ಟರ್ಕಿಯ ದಾಳಿಕೋರ ತೈಮೂರ್ ಮತ್ತು ಎರಡನೇ ಮಗುವಿಗೆ ಮೊಘಲ್ ಚಕ್ರವರ್ತಿ ಜಹಾಂಗೀರ್ ಹೆಸರನ್ನು ಇಡಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

 

ಕರೀನಾ ಕಪೂರ್ ಬಿಡುಗಡೆ ಮಾಡಿರುವ ಹೊಸ ಪುಸ್ತಕ ಪ್ರೆಗ್ನೆಗ್ಸಿ ಬೈಬಲ್‌ನಲ್ಲಿ ಎರಡನೇ ಮಗುವಿನ ಹೆಸರಿನ ವಿವರವನ್ನು ಬಹಿರಂಗಪಡಿಸಿದ್ದರು. ಇದಕ್ಕೂ ಮುನ್ನ ಮೊದಲನೇ ಮಗುವಿನ ಹೆಸರು ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಎರಡನೇ ಮಗುವಿನ ಹೆಸರನ್ನು ಬಹಿರಂಗಪಡಿಸಿರಲಿಲ್ಲ. ಅಲ್ಲದೆ ಇದುವರೆಗೆ 'ಜೆಹ್' ಎಂದು ಕರೆಯಲಾಗುತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು