ಶುಕ್ರವಾರ, ಡಿಸೆಂಬರ್ 3, 2021
24 °C

ಆರ್ಯನ್ ಖಾನ್ ಬಂಧನ: ಇದು ಶುದ್ಧ ಕಿರುಕುಳ ಎಂದ ಸ್ವರಾ ಭಾಸ್ಕರ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Swara Bhaskar Instagram Post

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿರುವುದನ್ನು ನಟಿ ಸ್ವರಾ ಭಾಸ್ಕರ್ ಖಂಡಿಸಿದ್ದಾರೆ.

ಕ್ರೂಸ್ ಹಡಗಿನಲ್ಲಿ ಡ್ರಗ್ಸ್ ಪಾರ್ಟಿಗೆ ಸಂಬಂಧಿಸಿ ಎನ್‌ಸಿಬಿ ಆರ್ಯನ್ ಖಾನ್‌ರನ್ನು ಅಕ್ಟೋಬರ್ 2ರಂದು ಬಂಧಿಸಿದೆ.

ಬಳಿಕ ಅವರನ್ನು ಎನ್‌ಸಿಬಿ ಕಸ್ಟಡಿಗೆ ನೀಡಲಾಗಿತ್ತು. ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಅವರ ಜಾಮೀನು ಅರ್ಜಿ ವಿಚಾರಣೆ ಅ. 20ಕ್ಕೆ ನಡೆಯಲಿದೆ.

ಆರ್ಯನ್ ಖಾನ್ ಬಂಧನ ವಿಚಾರವು ಶುದ್ಧ ಕಿರುಕುಳವಾಗಿದೆ ಎಂದು ಸ್ವರಾ ಭಾಸ್ಕರ್ ಟ್ವೀಟ್ ಮಾಡಿದ್ದಾರೆ.

ಜತೆಗೆ ಆರ್ಯನ್ ಬಂಧನ ಖಂಡಿಸಿ ಹಲವರು ಮಾಡಿರುವ ಟ್ವೀಟ್ ಅನ್ನು ಸ್ವರಾ ಭಾಸ್ಕರ್ ರಿಟ್ವೀಟ್ ಮಾಡಿದ್ದಾರೆ.

ಪುತ್ರ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿರುವ ಬೆನ್ನಲ್ಲೇ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳು ಶಾರುಖ್ ಖಾನ್‌ಗೆ ಬೆಂಬಲ ಸೂಚಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು