ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ಜೊತೆಗೇ ಪ್ರೀತಿಯಲ್ಲಿ ಬೀಳುವಿರಿ: ಹೊಸ ಸಿನಿಮಾಗಳ ಬಗ್ಗೆ ರಮ್ಯಾ ಮಾತು

Last Updated 20 ಜನವರಿ 2023, 0:15 IST
ಅಕ್ಷರ ಗಾತ್ರ

ಸಂಕ್ರಾಂತಿ ಸಂಭ್ರಮದ ಸಂದರ್ಭದಲ್ಲಿ ನಟಿ ರಮ್ಯಾ ತಮ್ಮ ನಿರ್ಮಾಣದ ಹೊಸ ಪ್ರಾಜೆಕ್ಟ್‌ನ ಕೆಲವು ಸನ್ನಿವೇಶಗಳ ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಚಿತ್ರದ ಕುರಿತು ಮತ್ತಷ್ಟು ಕುತೂಹಲವನ್ನು ಹುಟ್ಟಿಸಿದೆ.

2023ರ ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾದ ಈ ಸಿನಿಮಾ ಈಗಾಗಲೇ ಹಲವು ಕಾರಣಗಳಿಗೆ ಗಾಂಧಿನಗರದಲ್ಲಿ ಸದ್ದು ಮಾಡಿದೆ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಕ್ವೀನ್, ನಟಿ ರಮ್ಯಾ ಸಿನಿಮಾ ನಿರ್ಮಾಣಕ್ಕೆ ಇಳಿದಿದ್ದಾರೆ. ತಮ್ಮ ನಿರ್ಮಾಣ ಸಂಸ್ಥೆ ‘ಆ್ಯಪಲ್ ಬಾಕ್ಸ್ ಸ್ಟುಡಿಯೋಸ್’ನಡಿ ನಿರ್ಮಾಪಕಿಯಾಗಿ ರಮ್ಯಾ ಚಂದನವನದಲ್ಲಿ ತಮ್ಮ ಹೊಸ ಪಯಣ ಆರಂಭಿಸಿದ್ದು, ‘ಲೈಟರ್ ಬುದ್ಧ ಫಿಲಂಸ್’ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ. ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಈ ಚಿತ್ರವು ಸದ್ಯ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದ್ದು, ರಾಜ್‌ಗೆ ನಟಿ ಸಿರಿ ರವಿಕುಮಾರ್ ಇಲ್ಲಿ ಜೋಡಿಯಾಗಿದ್ದಾರೆ. ‘ಪ್ರೇರಣಾ’ ಮತ್ತು ‘ಅನಿಕೇತ್’ ಎಂಬ ಮುಖ್ಯ ಪಾತ್ರಗಳಲ್ಲಿ ಕ್ರಮವಾಗಿ ಸಿರಿ ಹಾಗೂ ರಾಜ್ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಕುರಿತು ಅನುಭವ ಹಂಚಿಕೊಂಡಿರುವ ರಮ್ಯಾ, ‘ಈ ಚಿತ್ರವು ನಮ್ಮೆಲ್ಲರನ್ನು ಪ್ರೀತಿ-ಪ್ರೇಮದೊಂದಿಗೆ ಒಲವಾಗುವಂತೆ ಮಾಡುತ್ತದೆ. ಮೊದಲ ಬಾರಿ ನಾನು ನಿರ್ಮಾಪಕಿಯ ಜವಾಬ್ದಾರಿ ನಿರ್ವಹಿಸುತ್ತಾ ಬಹಳಷ್ಟು ವಿಷಯಗಳನ್ನು ಕಲಿತೆ. ನನಗಿದೊಂದು ಅದ್ಭುತವಾದ ಅನುಭವ. ಈ ಚಿತ್ರವು ಪ್ರೀತಿ ಹಾಗು ಆತ್ಮಶೋಧನೆಯನ್ನು ಕುರಿತ ಒಂದು ಸುಂದರ, ಕಾವ್ಯಾತ್ಮಕ ಅನುಭವ’ ಎಂದಿದ್ದಾರೆ.

‘ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಪ್ರಕಾಶ್‌ ತೂಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಮತ್ತಿತರರಿದ್ದಾರೆ. ಚಿತ್ರಕ್ಕೆ ಮಿಧುನ್ ಮುಕುಂದನ್ ಸಂಗೀತ ಸಂಯೋಜಿಸಲಿದ್ದು, ಪ್ರವೀಣ್ ಶ್ರೀಯಾನ್ - ಛಾಯಾಗ್ರಹಣ ಹಾಗು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT