ಭಾನುವಾರ, ಸೆಪ್ಟೆಂಬರ್ 26, 2021
29 °C

ಟಿ–ಸಿರೀಸ್, ರಿಲಯನ್ಸ್ ಎಂಟರ್‌ಟೈನ್‌ಮೆಂಟ್‌ನಿಂದ ಬಿಗ್ ಬಜೆಟ್ ಸಿನಿಮಾ ನಿರ್ಮಾಣ

ಪಿಟಿಐ Updated:

ಅಕ್ಷರ ಗಾತ್ರ : | |

ವಿವಿಧ ಪ್ರಕಾರಗಳ ಹತ್ತಕ್ಕೂ ಹೆಚ್ಚು ದೊಡ್ಡ ಬಜೆಟ್‌ನ ಸಿನಿಮಾಗಳ ನಿರ್ಮಾಣದಲ್ಲಿ ಕೈಜೋಡಿಸಲು ಟಿ–ಸಿರೀಸ್ ಮತ್ತು ರಿಲಯನ್ಸ್‌ ಎಂಟರ್‌ಟೈನ್‌ಮೆಂಟ್ ಮುಂದಾಗಿವೆ.

ಉಭಯ ಸಂಸ್ಥೆಗಳು ಒಟ್ಟಾಗಿ ₹1,000 ಕೋಟಿ ಹೂಡಿಕೆ ಮಾಡಲಿವೆ. ಇವು ನಿರ್ಮಾಣ ಮಾಡಲಿರುವ ಚಿತ್ರಗಳಲ್ಲಿ ದೊಡ್ಡ ಬಜೆಟ್‌ ಮತ್ತು ಮಧ್ಯಮ–ಸಣ್ಣ ಬಜೆಟ್‌ನ ‘ಕಂಟೆಂಟ್ ರಿಚ್’ ಸಿನಿಮಾಗಳೂ ಸೇರಿವೆ ಎಂದು ಪ್ರಕಟಣೆ ತಿಳಿಸಿದೆ.

ಓದಿ: 

ತಮಿಳು ಬ್ಲಾಕ್‌ಬಸ್ಟರ್‌ಗಳ ಹಿಂದಿ ರಿಮೇಕ್‌, ಬಯೋಪಿಕ್, ಬೇಹುಗಾರಿಕಾ ಕಥೆ ಆಧಾರಿತ ಥ್ರಿಲ್ಲರ್, ವಿಡಂಬನಾತ್ಮಕ ಹಾಸ್ಯ ಮತ್ತು ನೈಜ ಘಟನೆ ಆಧಾರಿತ ಸಿನಿಮಾಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಮುಂದಿನ 24ರಿಂದ 36 ತಿಂಗಳುಗಳ ಒಳಗೆ ಈ ಸಿನಿಮಾಗಳು ತೆರೆಗೆ ಬರಲಿವೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ನೂರಕ್ಕೂ ಹೆಚ್ಚು ಸಿನಿಮಾಗಳ ಮ್ಯೂಸಿಕ್ ಮಾರ್ಕೆಟಿಂಗ್‌ಗಾಗಿ ಟಿ–ಸಿರೀಸ್ ಮತ್ತು ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಗಳು ಈಗಾಗಲೇ ಜತೆಯಾಗಿ ಕೆಲಸ ಮಾಡಿವೆ.

ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು