ಶನಿವಾರ, ಜೂನ್ 19, 2021
26 °C
ಹೊಸ ಸಿನಿಮಾ ಘೋಷಣೆ

ರಶ್ಮಿ ರಾಕೆಟ್: ಪರದೆ ಮೇಲೆ ಮಿಂಚಿನಂತೆ ಓಡುತ್ತಾರಂತೆ ನಟಿ ತಾಪ್ಸಿ ಪನ್ನು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟಿ ತಾಪ್ಸಿ ಪನ್ನು ಕ್ರಿಕೆಟ್‌ ಆಟಗಾರ್ತಿ ಮಿಥಾಲಿ ರಾಜ್‌ ಅವರ ಬಯೋಪಿಕ್‌ನಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಮತ್ತೊಂದು ಸ್ಪೋರ್ಟ್ಸ್‌ ಬಯೋಪಿಕ್‌ನಲ್ಲಿ ಆಕೆ ನಟಿಸುತ್ತಿರುವುದಾಗಿ ಘೋಷಿಸಿದ್ದಾರೆ. ಈ ಚಿತ್ರದ ಹೆಸರು ‘ರಶ್ಮಿ ರಾಕೆಟ್‌’.

‘ಮಿಷನ್‌ ಮಂಗಲ್‌’ ಚಿತ್ರದಲ್ಲಿ ಆಕೆ ರಾಕೆಟ್‌ ಉಡ್ಡಯನ ಮಾಡುವ ವಿಜ್ಞಾನಿ ಪಾತ್ರದಲ್ಲಿ ನಟಿಸಿದ್ದರು. ಆದರೆ, ಹೊಸ ಚಿತ್ರದಲ್ಲಿ ಆಕೆ ಅಥ್ಲೀಟ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ನವೆಂಬರ್‌ನಿಂದ ಈ ಸಿನಿಮಾದ ಶೂಟಿಂಗ್‌ ಶುರುವಾಗಲಿದೆಯಂತೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ಆಕರ್ಷ್‌ ಖುರಾನ. ರೋನಿ ಸ್ಕ್ರೂವಾಲ, ನೇಹಾ ಆನಂದ್ ಮತ್ತು ಪ್ರಾಂಜಲ್ ಖಂಡ್ದಿಯಾ ಬಂಡವಾಳ ಹೂಡುತ್ತಿದ್ದಾರೆ.

ಗುಜರಾತ್‌ನ ವೇಗದ ಓಟಗಾರ್ತಿ ರಶ್ಮಿ ಅವರ ಬದುಕಿನ ಕಥೆ ಇದು. ಗ್ರಾಮಸ್ಥರು ಆಕೆಗೆ ‘ರಾಕೆಟ್‌’ ಎಂಬ ನಿಕ್‌ನೇಮ್‌ ಇಟ್ಟಿದ್ದಾರಂತೆ. ಹಾಗಾಗಿಯೇ, ಚಿತ್ರಕ್ಕೆ ‘ರಶ್ಮಿ ರಾಕೆಟ್‌’ ಎಂಬ ಟೈಟಲ್‌ ಇಡಲಾಗಿದೆ. ತಾಪ್ಸಿಯ ಫಸ್ಟ್‌ಲುಕ್‌ ಪೋಸ್ಟರ್‌ ಕೂಡ ಬಿಡುಗಡೆಯಾಗಿದ್ದು, ಇದನ್ನು ಆಕೆ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 

‘ಸಣ್ಣ ಬಿಡುವಿನ ನಂತರ ನಟನೆಗೆ ಮತ್ತೆ ಮರಳುತ್ತಿದ್ದೇನೆ’ ಎಂದು ಆಕೆ ಟ್ವೀಟ್‌ ಮಾಡಿದ್ದಾರೆ. ಪ್ರಿಯಾನ್ಶು ಪೈನ್ಯುಲಿ ಅವರು ಪರದೆ ಮೇಲೆ ತಾಪ್ಸಿ ಪನ್ನು ಅವರ ಗಂಡನಾಗಿ ನಟಿಸಲಿದ್ದಾರೆ.

ತಾಪ್ಸಿ ನಟಿಸಿದ ಕೊನೆಯ ಚಿತ್ರ ಅನುಭವ್‌ ಸಿನ್ಹ ನಿರ್ದೇಶನದ ‘ಥಪ್ಪಡ್‌’. ಇದರಲ್ಲಿ ಆಕೆ ನಿಭಾಯಿಸಿದ ಗೃಹಿಣಿಯ ಪಾತ್ರಕ್ಕೆ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ತಮಿಳಿನ ‘ಜನ ಗಣ ಮನ’ ಚಿತ್ರದಲ್ಲೂ ಆಕೆ ನಟಿಸಿದ್ದು, ಇದರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ನಡೆಯುತ್ತಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು