ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ಪ್ರಪಂಚದಲ್ಲಿ ಕರಿಯಪ್ಪನ ಪಾತ್ರ!

Last Updated 1 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕಳೆದ ವರ್ಷ ತೆರೆಗೆಬಂದ ಹಾಸ್ಯಮಯ ಚಿತ್ರಗಳ ಸಾಲಿನಲ್ಲಿ ಕೆಮಿಸ್ಟ್ರಿಆಫ್ ಕರಿಯಪ್ಪ’ಕೂಡ ಒಂದು.ಈಚಿತ್ರದಲ್ಲಿಕರಿಯಪ್ಪನಪಾತ್ರನಿರ್ವಹಿಸಿದ್ದು ತಬಲಾ ನಾಣಿ.

ಇವರು ‘Present ಪ್ರಪಂಚ 0% ಲವ್’ ಚಿತ್ರದಲ್ಲೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ, ತಬಲಾ ನಾಣಿ ಅವರು ಯಾವಪಾತ್ರನಿರ್ವಹಿಸಿದ್ದಾರೆ ಎನ್ನುವ ಪ್ರಶ್ನೆಗೆ ಸಿನಿಮಾ ತಂಡ ಉತ್ತರ ನೀಡಿಲ್ಲ. ಆ ಪ್ರಶ್ನೆಗೆ ಉತ್ತರವನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು ಎಂದು ಸಿನಿತಂಡ ಹೇಳಿದೆ.

ಫ್ರೆಂಡ್ಸ್ ಮೀಡಿಯಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೃಷ್ಣಮೂರ್ತಿ ಹಾಗೂ ರವಿಕುಮಾರ್ಈಚಿತ್ರ ನಿರ್ಮಿಸಿದ್ದಾರೆ.ಈಹಿಂದೆ ‘ಸಂಯುಕ್ತ 2’ ಚಿತ್ರ ನಿರ್ದೇಶಿಸಿದ್ದ ಅಭಿರಾಮ್ಈಚಿತ್ರದ ನಿರ್ದೇಶಕರು. ರವಿತೇಜಸ್ವಿ ಸಂಗೀತ ನಿರ್ದೇಶನ, ಈಶ್ವರಿ ಸುರೇಶ್ ಛಾಯಾಗ್ರಹಣ, ವೆಂಕಿ ಸಂಕಲನಈಚಿತ್ರಕ್ಕಿದೆ.

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಹಾಗೂ ‘ಸಂಯುಕ್ತ 2’ ಚಿತ್ರಗಳ ನಿರ್ಮಾಪಕ ಅರ್ಜುನ್ ಮಂಜುನಾಥ್ಈಚಿತ್ರದ ನಾಯಕ. ಯಶಸ್ ಅಭಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಭ್ರಮಶ್ರೀ, ಅಕ್ಷತಾಈಚಿತ್ರದ ನಾಯಕಿಯರು. ಸೆಂಟಿಮೆಂಟ್, ಕಾಮಿಡಿ, ಲವ್ ಹಾಗೂ ಕೌಟುಂಬಿಕ ಕಥಾಹಂದರವಿರುವಈಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT