ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಸೆಟ್ ಟ್ರೆಂಡ್: ವಾಣಿ ಕಪೂರ್ ಲುಕ್‌ಗೆ ಅಭಿಮಾನಿಗಳು ಫಿದಾ, ಫೋಟೊ ವೈರಲ್

ಅಕ್ಷರ ಗಾತ್ರ

ಮುಂಬೈ: ಫ್ಯಾಷನ್‌ಗೆ ಹೆಚ್ಚು ಒತ್ತು ನೀಡುವ ಬಾಲಿವುಡ್‌ ನಟಿ ವಾಣಿ ಕಪೂರ್ ಅವರು ಈ ಬಾರಿ ಕಾರ್ಸೆಟ್ ಟ್ರೆಂಡ್‌ ಅನುಸರಿಸುವ ಮೂಲಕ ಸುದ್ದಿಯಲ್ಲಿದ್ದಾರೆ.

ಹೌದು, ಇತ್ತೀಚೆಗೆ ಸೆಲೆಬ್ರಿಟಿಗಳು ತಮ್ಮದೇ ಆದ ಟ್ರೆಂಡ್ ಸೃಷ್ಟಿಸಲು ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದಕ್ಕೆ ವಾಣಿ ಕಪೂರ್‌ ಹೊರತಾಗಿಲ್ಲ.

‘ಶಂಶೇರಾ’ ಸಿನಿಮಾದ ಪ್ರಚಾರ ನಿಮಿತ್ತ ಇತ್ತೀಚೆಗೆ ಟಿವಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಾಣಿ ಕಪೂರ್, ಪಿಂಕ್ ಪ್ಯಾಂಟ್‌ (ತಿಳಿ ಗುಲಾಬಿ ಬಣ್ಣ) ಮತ್ತು ಸಿಲ್ವರ್ ಕಾರ್ಸೆಟ್ (ಕ್ರಾಪ್ಡ್ ಬ್ಲೌಸ್‍) ಧರಿಸಿದ್ದ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.

ಇದೀಗ ವಾಣಿ ಕಪೂರ್ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿನಿಪ್ರಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಾಲಿವುಡ್ ನಟ ರಣಬೀರ್ ಕಪೂರ್ – ವಾಣಿ ಕಪೂರ್ ಅಭಿನಯದ ‘ಶಂಶೇರಾ’ ಸಿನಿಮಾ ಜುಲೈ 22ರಂದು ಬಿಡುಗಡೆಯಾಗಲಿದೆ. ಚಿತ್ರತಂಡದೊಂದಿಗೆ ವಾಣಿ ಕಪೂರ್ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.

ಈ ಕುರಿತು ಯಶ್‌ ರಾಜ್‌ ಬ್ಯಾನರ್‌ ತನ್ನ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದ್ದು, ‘ಜುಲೈ 22ರಂದು ‘ಶಂಶೇರಾ’ ಸಿನಿಮಾ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ತೆರೆಕಾಣಲಿದೆ’ ಎಂದು ಬರೆದುಕೊಂಡಿದೆ.

ಯಶ್‌ ರಾಜ್‌ ಬ್ಯಾನರ್‌ನಡಿ ‘ಶಂಶೇರಾ’ ಸಿನಿಮಾ ನಿರ್ಮಿಸಲಾಗುತ್ತಿದೆ. ಕರಣ್‌ ಮಲ್ಹೋತ್ರ ನಿರ್ದೇಶನದ ಈ ಚಿತ್ರದಲ್ಲಿ ರಣ್‌ಬೀರ್‌ ಕಪೂರ್‌ ಜೊತೆಗೆ ಸಂಜಯ್‌ ದತ್‌ ಕೂಡ ನಟಿಸಿದ್ದಾರೆ.

ಈ ಹಿಂದೆ ಮಾರ್ಚ್ 18ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ದಿನಾಂಕ ಮುಂದೂಡಲಾಗಿತ್ತು.

ವಾಣಿ ಕಪೂರ್
ವಾಣಿ ಕಪೂರ್

ಇವನ್ನೂ ಓದಿ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT