ಮಂಗಳವಾರ, ಏಪ್ರಿಲ್ 13, 2021
25 °C

ಕನ್ನಡದ ‘ಟಕ್ಕರ್’ ತಮಿಳು ಭಾಷೆಗೆ ಡಬ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ‘ಟಕ್ಕರ್’ ಸಿನಿಮಾ ತಮಿಳಿನಲ್ಲೂ ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಚಿತ್ರವು ತಮಿಳು ಭಾಷೆಗೆ ಡಬ್ ಆಗಿ ಬಿಡುಗಡೆ ಆಗಲಿದೆ.

ಕೆ.ಎನ್. ನಾಗೇಶ್ ಕೋಗಿಲು ನಿರ್ಮಾಣದ ಚಿತ್ರ ಇದು. ವಿ. ರಘು ಶಾಸ್ತ್ರಿ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ಮನೋಜ್ ಕುಮಾರ್ ಮತ್ತು ರಂಜನಿ ರಾಘವನ್ ನಾಯಕ–ನಾಯಕಿಯರಾಗಿ ನಟಿಸಿದ್ದಾರೆ.

ಚಿತ್ರದ ಟೀಸರ್‌ಅನ್ನು ನಿರ್ದೇಶಕ ದಿನಕರ್ ತೂಗುದೀಪ ಬಿಡುಗಡೆ ಮಾಡಿದ್ದರು. ದರ್ಶನ್ ಅವರು ಟೀಸರ್‌ ಮೆಚ್ಚಿಕೊಂಡಿದ್ದರು. ಚಿತ್ರದ ನಾಯಕ ಮನೋಜ್ ಕುಮಾರ್ ಅವರಿಗೆ ಇದು ಮೊದಲ ಸಿನಿಮಾ. ಅಂದಹಾಗೆ, ಮೊದಲ ಸಿನಿಮಾ ಬಿಡುಗಡೆಗೆ ಮುನ್ನವೇ ಅವರ ನಟನೆಯ ಇನ್ನೂ ಎರಡು ಚಿತ್ರಗಳು ಆರಂಭವಾಗುತ್ತಿವೆ ಎಂಬ ಸುದ್ದಿ ಕೂಡ ಬಂದಿದೆ.

‘ಟಕ್ಕರ್’ ಚಿತ್ರದಲ್ಲಿ ಮೂವತ್ತು ನಿಮಿಷಗಳ ಗ್ರಾಫಿಕ್ಸ್‌ ದೃಶ್ಯಗಳು ಇವೆ. ಅದಕ್ಕಾಗಿ ನುರಿತ ತಂತ್ರಜ್ಞರ ತಂಡವೊಂದು ಕೆಲಸ ಮಾಡುತ್ತಿದೆ ಎಂದು ಸಿನಿತಂಡ ಹೇಳಿದೆ.

‘ಮೊಬೈಲ್ ಮತ್ತು ಇಂಟರ್‌ನೆಟ್‌ನಿಂದ ಆಗುವ ಅನಾಹುತಗಳು ಏನು, ಮಹಿಳೆಯರಿಗೆ ಅದು ಹೇಗೆ ಮಾರಕ ಎಂಬ ವಿಷಯ ಆಧರಿಸಿ ಈ ಚಿತ್ರ ರೂಪಿಸಲಾಗಿದೆ. ಆ್ಯಕ್ಷನ್, ಸೆಂಟಿಮೆಂಟ್ ಜೊತೆಗೆ ಮಾಸ್ ಚಿತ್ರವಾಗಿ ಟಕ್ಕರ್ ತೆರೆಗೆ ಬರಲಿದೆ’ ಎಂದು ಚಿತ್ರತಂಡ ಹೇಳಿದೆ.

ಚಿತ್ರದ ಡಬ್ಬಿಂಗ್ ಕೆಲಸಗಳು ಆರಂಭವಾಗಿವೆ ಎಂದು ನಾಗೇಶ್ ಕೋಗಿಲು ಹೇಳಿದ್ದಾರೆ. ಶಂಕರ್ ಅಶ್ವಥ್, ಸುಮಿತ್ರಾ, ಭಜರಂಗಿ ಲೋಕಿ, ಸಾಧು ಕೋಕಿಲ, ಜೈಜಗದೀಶ್ ತಾರಾಗಣದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿಲಿಯಮ್ ಡೇವಿಡ್ ಛಾಯಾಗ್ರಹಣ ಚಿತ್ರಕ್ಕಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು