ಶನಿವಾರ, ಜನವರಿ 18, 2020
21 °C

ತಮನ್ನಾ ಕೈಯಲ್ಲಿ ಸಿನಿಮಾಗಳಿಲ್ಲವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಹುಬಲಿ’ ಖ್ಯಾತಿಯ ನಟಿ ತಮನ್ನಾ ಭಾಟಿಯಾ ಈಗ ಸಿನಿಮಾಗಳ ಅವಕಾಶಗಳಿಲ್ಲದೇ ಖಾಲಿ ಕುಳಿತಿದ್ದಾರೆಯೇ? ಹೀಗೊಂದು ಮಾತು ಸಿನಿವಲಯದಲ್ಲಿ ಕೇಳಿಬರುತ್ತಿದೆ.

ಸುಮಾರು 60ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದವರು ತಮನ್ನಾ. ದಕ್ಷಿಣ ಭಾರತದ ಭಾಷೆಗಳ ಸಿನಿಮಾ ಹಾಗೂ ಬಾಲಿವುಡ್‌ನಲ್ಲೂ ಇವರು ಚಿರಪರಿಚಿತರು. ಈಗ ಇವರಿಗೆ ಹೆಚ್ಚು ಸಿನಿಮಾಗಳ ಅವಕಾಶಗಳು ಹುಡುಕಿಕೊಂಡು ಬರುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ.

ಸಿನಿಮಾ ಇಂಡಸ್ಟ್ರಿ ಎಂಬುದೇ ಹಾಗೇ. ಅದರಲ್ಲೂ ನಟಿಯರಿಗೆ ನೀರ ಮೇಲಿನ ಗುಳ್ಳೆಯಂತೆ ವೃತ್ತಿ ಬದುಕು. ಒಂದು ಸಿನಿಮಾ ಹಿಟ್‌ ಆದರೆ ಒಂದರ ಹಿಂದೆ ಒಂದರಂತೆ ನಾಲ್ಕೈದು ಸಿನಿಮಾಗಳ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೆ ಎರಡು ಸಿನಿಮಾಗಳು ಒಂದರ ಹಿಂದೆ ಒಂದರಂತೆ ಸೋತರೆ ಅವರಿಗೆ ಮಾರುಕಟ್ಟೆಯೇ ಬಿದ್ದು ಹೋಗುತ್ತದೆ. ಇಲ್ಲಿ ಪ್ರತಿದಿನ ಹೋರಾಟ ಮಾಡಬೇಕಾಗುತ್ತದೆ. ತಮನ್ನಾ ಭಾಟಿಯಾ ವಿಚಾರದಲ್ಲಿಯೂ ಈ ಸಂಗತಿ ನಿಜವೆನಿಸುತ್ತಿದೆ.

ಈಗಲೂ ಜನಪ್ರಿಯ ನಟಿಯರ ಸಾಲಿನಲ್ಲಿ ತಮನ್ನಾ ಹೆಸರಿದೆ. ‘ಬಾಹುಬಲಿ’ ನಂತರ ಅವರ ಹೆಸರು ಬಿಗ್‌ ಬ್ಯಾನರ್‌ ಸಿನಿಮಾಗಳಲ್ಲಿ ಕೇಳಿಬಂದಿತ್ತು. 2019ರಲ್ಲಿ ಅವರು ನಟಿಸಿದ ಎರಡು ಚಿತ್ರಗಳು ಹಿಟ್‌ ಆದರೂ ಅವರಿಗೆ ಹೇಳಿಕೊಳ್ಳುವಂತಹ ಸಿನಿಮಾ ಆಫರ್‌ಗಳು ಲಭಿಸಿಲ್ಲ.

ಇತ್ತೀಚೆಗೆ ಹೊಸಬರನ್ನು ನಿರ್ದೇಶಕರನ್ನು ತಮ್ಮ ಚಿತ್ರಕ್ಕೆ ಹಾಕಿಕೊಳ್ಳುತ್ತಿದ್ದಾರೆ. ತಮನ್ನಾ ಭಾಟಿಯಾ ಅವರು ವಿಶೇಷ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ಕನ್ನಡದ ‘ಜಾಗ್ವಾರ್‌’, ‘ಕೆಜಿಎಫ್‌ ಚಾಪ್ಟರ್‌ 1’ ಹಾಗೂ ಈಗ ಶೂಟಿಂಗ್‌ ಆಗುತ್ತಿರುವ ಮಹೇಶ್‌ ಬಾಬು ಅವರ ‘ಸರಿಲೇರು ನೀಕೆ‌ವ್ವರು’ ಚಿತ್ರಗಳಲ್ಲಿ ತಮನ್ನಾ ವಿಶೇಷ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ನವಾಜುದ್ದೀನ್‌ ಸಿದ್ದಿಕಿ ಅವರು ನಾಯಕನಾಗಿರುವ ‘ಬೋಲೆ ಚೂಡಿಯಾ’ ಸಿನಿಮಾದಲ್ಲಿ ತಮನ್ನಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗ ಅವರ ಕೈಯಲ್ಲಿರುವ ಚಿತ್ರ ಇದೊಂದೇ. ಬೇರೆ ಯಾವ ಚಿತ್ರಗಳನ್ನೂ ಅವರು ಘೋಷಣೆ ಮಾಡಿಲ್ಲ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು