ಶನಿವಾರ, ಜನವರಿ 18, 2020
26 °C
ಕಾಲಿವುಡ್

‘ಮಾಸ್ಟರ್‌’ಗಾಗಿ ಮೀಸೆ ತೆಗೆದ ವಿಜಯ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಕ್ಷಿಣ ಭಾರತದ ಖ್ಯಾತ ತಮಿಳು ನಟ ವಿಜಯ್‌ ಇದೇ ಮೊದಲ ಬಾರಿಗೆ ಪಾತ್ರವೊಂದಕ್ಕಾಗಿ ಗಡ್ಡ, ಮೀಸೆ ತೆಗೆದಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 

ಲೋಕೇಶ್‌ ಕನಗರಾಜ್‌ ನಿರ್ದೇಶನದ ‘ಮಾಸ್ಟರ್‌’ ಚಿತ್ರಕ್ಕಾಗಿ ವಿಜಯ್‌ ಮೀಸೆ ತೆಗೆಸಿದ್ದು, ಇದು ಅವರ 64ನೇ ಚಿತ್ರ. ವಿಜಯ್‌ ಸೇತುಪತಿ ಕೂಡ ಈ ಚಿತ್ರದಲ್ಲಿದ್ದಾರೆ. ಈಗಾಗಲೇ ದೆಹಲಿ ಮತ್ತು ಕರ್ನಾಟಕದ ಶಿವಮೊಗ್ಗದಲ್ಲಿ ಚಿತ್ರೀಕರಣ ಮುಗಿಸಿರುವ ‘ಮಾಸ್ಟರ್‌‘ ಚಿತ್ರತಂಡ ಈಗ ಚೆನ್ನೈನಲ್ಲಿ ಭರದಿಂದ ಶೂಟಿಂಗ್‌ ನಡೆಸುತ್ತಿದೆ. 

ಗಡ್ಡ, ಮೀಸೆ ಬೋಳಿಸಿಕೊಂಡ ವಿಜಯ್‌ ಚೆನ್ನೈನ ಜೈಲಿನಲ್ಲಿ ಚಿತ್ರೀಕರಣದ ಸೆಟ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅವರನ್ನು  ತಕ್ಷಣಕ್ಕೆ ಗುರುತಿಸುವುದು ಸಾಧ್ಯವಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿದ್ದ ವಿಜಯ್‌ ಅಭಿನಯದ ‘ಬಿಗಿಲ್‌’ ಭಾರಿ ಯಶಸ್ಸು ಗಳಿಸಿತ್ತು. ಈ ಚಿತ್ರಕ್ಕೆ ಅಟ್ಲೀ ಆ್ಯಕ್ಷನ್‌ ಕಟ್‌ ಹೇಳಿದ್ದರು.

ಪ್ರತಿಕ್ರಿಯಿಸಿ (+)