ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳು ಚಿತ್ರರಂಗದ ಗಾಯಕಿ ಉಮಾ ರಮಣನ್ ನಿಧನ

Published 2 ಮೇ 2024, 7:25 IST
Last Updated 2 ಮೇ 2024, 7:25 IST
ಅಕ್ಷರ ಗಾತ್ರ

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ಗಾಯಕಿ ಉಮಾ ರಮಣನ್ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಉಮಾ ರಮಣನ್‌ ಅವರು ಪತಿ ಅವಿ ರಮಣನ್ ಹಾಗೂ ಪುತ್ರನನ್ನು ಅಗಲಿದ್ದಾರೆ. ಉಮಾ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಉಮಾ ರಮಣನ್ ಅವರು 35 ವರ್ಷಗಳ ಅವಧಿಯಲ್ಲಿ 6000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ. ಉಮಾ ಅವರು ಇಳಯರಾಜ, ವಿದ್ಯಾಸಾಗರ್, ಮಣಿಶರ್ಮಾ ಅವರು ರಾಗ ಸಂಯೋಜಿಸಿರುವ ನೂರಾರು ಹಾಡುಗಳನ್ನು ಹಾಡಿದ್ದರು. 

ಉಮಾ ರಮಣನ್ ನಿಧನಕ್ಕೆ ತಮಿಳು ಸಿನಿಮಾರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT