ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಥಾಲಿ ಪಾತ್ರದಲ್ಲಿ ತಾಪ್ಸಿ

Last Updated 8 ಜುಲೈ 2019, 19:45 IST
ಅಕ್ಷರ ಗಾತ್ರ

ನಟಿ ತಾಪ್ಸಿ ಪನ್ನು ಮೊದಲ ಬಾರಿಗೆ ಕ್ರಿಕೆಟ್ ಆಟಗಾರ್ತಿಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದ್ದಾರೆ.

ಹಿಂದಿನ ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್‌ ತಂಡವನ್ನು ಸೆಮಿಫೈನಲ್‌ ಹಂತಕ್ಕೆ ಕೊಂಡೊಯ್ದಿದ್ದ ನಾಯಕಿ ಮಿಥಾಲಿ ರಾಜ್‌ ಅವರ ಪಾತ್ರಕ್ಕೆ ತಾಪ್ಸಿ ಬಣ್ಣ ಹಚ್ಚಲಿದ್ದಾರೆ.

ಕ್ರಿಕೆಟ್‌, ಹಾಕಿ, ಬ್ಯಾಡ್ಮಿಂಟನ್ ಸೇರಿದಂತೆ ಭಾರತದ ಪ್ರಮುಖ ಆಟಗಾರರ ಜೀವನ ಕತೆಯನ್ನು ಆಧರಿಸಿದ ಚಿತ್ರಗಳು ಬಾಲಿವುಡ್‌ನಲ್ಲಿ ಸೆಟ್ಟೇರುತ್ತಿವೆ. ‘ಭಾಗ್‌ ಮಿಲ್ಕಾ ಭಾಗ್‌’, ‘ಎಂ.ಎಸ್‌.ದೋನಿ ದಿ ಅನ್‌ಟೋಲ್ಡ್‌ ಸ್ಟೋರಿ’, ಸೇರಿದಂತೆ ಸಾಕಷ್ಟು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಿದ್ದವು. ಈಗ ಸೈನಾ ನೆಹ್ವಾಲ್‌, ಪಿ.ವಿ.ಸಿಂಧು ಅವರ ವೃತ್ತಿಜೀವನವನ್ನು ಆಧರಿಸಿದ ಸಿನಿಮಾಗಳು ಕೂಡ ಬರಲಿವೆ.

ರಣವೀರ್ ಸಿಂಗ್‌ ಅವರು ಕಪಿಲ್‌ದೇವ್‌ ಜೀವನ ಆಧಾರಿತ ಸಿನಿಮಾದ ಶೂಟಿಂಗ್‌ನಲ್ಲಿ ನಿರತರಾಗಿದ್ದಾರೆ. ಮಹಿಳಾ ಕ್ರಿಕೆಟ್ ತಂಡದ ಸಾರಥ್ಯ ವಹಿಸಿ ಸೈ ಎನಿಸಿಕೊಂಡಿರುವ ಮಿಥಾಲಿ ಅವರ ಜೀವನ ಕತೆ ಆಧಾರಿತ ಸಿನಿಮಾದಲ್ಲಿ ತಾಪ್ಸಿ ಅಭಿನಯಿಸಲಿದ್ದಾರೆ.

ಸವಾಲಿನ ಪಾತ್ರಗಳನ್ನು ಆಯ್ದುಕೊಳ್ಳುವ ಮೂಲಕ ನಟಿ ತಾಪ್ಸಿ ಅವರು, ಅಮಿತಾಭ್‌ ಬಚ್ಚನ್‌ ಸೇರಿದಂತೆ ಹಲವು ನಟರೊಂದಿಗೆ ಕಾಣಿಸಿಕೊಂಡು ಈಗಾಗಲೇ ಬಾಲಿವುಡ್‌ನಲ್ಲಿ ನೆಲೆ ನಿಂತಿದ್ದಾರೆ. ಸೈನಾ ನೆಹ್ವಾಲ್‌ ಪಾತ್ರವನ್ನು ಪರಿಣೀತಿ ಚೋಪ್ರಾ ಮಾಡಲಿರುವುದು ಬಹುತೇಕ ಖಚಿತಗೊಂಡಿದೆ.

ಮೂಲಗಳ ಪ್ರಕಾರ ತಾಪ್ಸಿ ಬೇರೆ ಸಿನಿಮಾಗಳಲ್ಲಿ ನಿರತರಾಗಿದ್ದು, ಮಿಥಾಲಿ ರಾಜ್‌ ಅವರ ಜೀವನ ಕತೆ ಆಧರಿಸಿದ ಸಿನಿಮಾಕ್ಕೆ ಅವರಿನ್ನೂ ಸಹಿ ಮಾಡಿಲ್ಲ. ಆದರೆ ಈ ಚಿತ್ರಕ್ಕೆ ಅವರು ಒಪ್ಪಿಕೊಂಡಿದ್ದಾರೆ. ಸ್ಕ್ರಿಪ್ಟಿಂಗ್‌ ತಯಾರಿ ನಡೆಸಲಾಗುತ್ತಿದೆ ಎಂದು ಸಿನಿಮಾ ತಂಡ ಹೇಳಿಕೊಂಡಿದೆ.

‘ಬದ್ಲಾ ಸಿನಿಮಾ ನನಗೆ ಸಾಕಷ್ಟು ಯಶಸ್ಸು ತಂದುಕೊಟ್ಟಿದೆ. ಈ ಹಂತದಲ್ಲಿ ನಾನು ಎಚ್ಚರಿಕೆಯಿಂದ ಮುಂದಿನ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಮಿಥಾಲಿ ರಾಜ್‌ ಪಾತ್ರದ ಬಗ್ಗೆ ನಾನು ಈಗಲೇ ಏನು ಹೇಳಲು ಸಾಧ್ಯವಿಲ್ಲ. ನನಗೆ ಪಾತ್ರ ಮಾಡಲು ಕೇಳಿದ್ದಾರೆ. ಇಂತಹ ಪಾತ್ರ ಮಾಡಲು ನಿಜವಾಗಲೂ ಖುಷಿ ಇದೆ. ಆದರೆ ಸ್ಕ್ರಿಪ್ಟಿಂಗ್ ಕೆಲಸಗಳು ಇನ್ನೂ ಮುಗಿದಿಲ್ಲ’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಮಿಥಾಲಿ ರಾಜ್‌ ಅಂತರರಾಷ್ಟ್ರೀಯ ಮಹಿಳೆಯರ ಏಕದಿನ ಕ್ರಿಕೆಟ್‌ನಲ್ಲಿ 6,000 ರನ್‌ ಮೈಲುಗಲ್ಲು ತಲುಪಿದ್ದಾರೆ. ಮುಂದಿನ ವರ್ಷ ಈ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ. ಕೆಲವೇ ತಿಂಗಳಲ್ಲಿ ತಾಪ್ಸಿ ಕ್ರಿಕೆಟ್ ತರಬೇತಿ ಪಡೆದುಕೊಳ್ಳಲಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳಿವೆ.

ಸದ್ಯ ‘ಸಾಂಡ್ ಕಿ ಆಂಖ್‌’ ಸಿನಿಮಾ ಬಿಡಗಡೆಗೆ ತಾಪ್ಸಿ ಕಾಯುತ್ತಿದ್ದಾರೆ. ಇದರಲ್ಲಿ ಅವರು ಶಾರ್ಪ್‌ಶೂಟರ್ ಪಾತ್ರವನ್ನು ನಿಭಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT