ಕಂಗನಾ ರನೋಟ್ ಅಭಿನಯದ ‘ಜಡ್ಜ್ಮೆಂಟಲ್ ಹೈ ಕ್ಯಾ’ ಸಿನಿಮಾದ ಟ್ರೇಲರ್ ಬಿಡುಗಡೆಗೊಂಡು ಸಾಕಷ್ಟು ಸದ್ದು ಮಾಡುತ್ತಿದೆ. ಈ ಹೊತ್ತಿನಲ್ಲಿಯೇ ನಟಿ ತಾಪ್ಸಿ ಪನ್ನು ಅವರ ಟ್ವೀಟ್ಗೆ ಕಂಗನಾ ಸಹೋದರಿ ಗರಂ ಆಗಿದ್ದಾರೆ.

ವರುಣ್ ಧವನ್ ಹಾಗೂ ತಾಪ್ಸಿ ಇಬ್ಬರೂ ಸಿನಿಮಾದ ಟ್ರೇಲರ್ ಭರವಸೆ ಮೂಡಿಸಿದೆ ಎಂದು ಸಕಾರಾತ್ಮಕವಾಗಿಯೇ ಟ್ವೀಟ್ ಮಾಡಿದ್ದಾರೆ. ಕಂಗನಾ ಸಹೋದರಿ ರಂಗೋಲಿ ಚಂಡೇಲ್ ಇದಕ್ಕೆ ಬೇರೆಯದೇ ದೃಷ್ಟಿಕೋನ ನೀಡುವ ಮೂಲಕ ಜಗಳ ಆಡಿದ್ದಾರೆ.

‘ದಿಸ್ ಈಸ್ ಸೋ ಕೂಲ್, ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ನೋಡಬೇಕಾದ ಸಿನಿಮಾ’ ಎಂದು ತಾಪ್ಸಿ ಟ್ವೀಟ್ ಮಾಡಿದ್ದಾರೆ. ಆದರೆ ಇದಕ್ಕೆ ರಂಗೋಲಿ ‘ಕೆಲವರು ಕಂಗನಾ ಅವರನ್ನು ಕಾಪಿ ಮಾಡಿಕೊಂಡೇ ತಮ್ಮ ಮನೆಯ ಬೇಳೆ ಬೇಯಿಸಿಕೊಂಡಿದ್ದಾರೆ. ಇದಕ್ಕಾಗಿ ಕಂಗನಾಳನ್ನು ಅವರು ಎಂದೂ ಹೊಗಳುವುದಿಲ್ಲ. ಬದಲಾಗಿ ಸಿನಿಮಾ ಕುರಿತು ಬರೆಯುವಾಗ ಕಂಗನಾ ಕುರಿತು ಉಲ್ಲೇಖ ಕೂಡ ಮಾಡಿಲ್ಲ. ತಾಪ್ಸಿ ನೀವು ಕಾಪಿ ಮಾಡುವುದನ್ನು ಬಿಡಬೇಕು’ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ತಾಪ್ಸಿ ಪನ್ನು ಅವರ ಸ್ನೇಹಿತ ಹಾಗೂ ನಿರ್ದೇಶಕ ಅನುರಾಗ್ ಕಶ್ಯಪ್ ಈ ಟ್ವೀಟ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಂಗೋಲಿ ನೀವು ತುಂಬಾ ದೂರದ ಚಿಂತನೆ ಮಾಡಿದ್ದೀರಿ. ಹತಾಷೆಗೆ ಒಳಗಾಗಿ ಮಾತನಾಡಿದ್ದೀರಿ. ನೀವು ಏನು ಹೇಳುತ್ತಿದ್ದೀರಿ ನಿಜವಾಗಲೂ ನನಗೆ ಅರ್ಥ ಆಗುತ್ತಿಲ್ಲ. ನಿಮ್ಮ ಸಹೋದರಿ ಹಾಗೂ ತಾಪ್ಸಿ ಇಬ್ಬರ ಜೊತೆಗೂ ನಾನು ಕೆಲಸ ಮಾಡಿದ್ದೇನೆ. ಟ್ರೈಲರ್ ಹೊಗಳಿದ ಮೇಲೆ ಸಿನಿಮಾದ ಬಗ್ಗೆ ಒಳ್ಳೆಯ ಅಭಿಪ್ರಾಯ ಇದೆ ಎಂದೇ ಅರ್ಥ. ಹೊಗಳಿಕೆಯಲ್ಲಿ ಕಂಗನಾ ಕೂಡ ಸೇರಿರುತ್ತಾರೆ’ ಎಂದು ತಾಪ್ಸಿ ಪರ ಮಾತನಾಡಿದ್ದಾರೆ.

ಪ್ರಕಾಶ್ ಕೋವಲಮುಡಿ ನಿರ್ದೇಶನದ ‘ಜಡ್ಜ್ಮೆಂಟಲ್ ಹೈ ಕ್ಯಾ’ ಸಿನಿಮಾ ಜುಲೈ 26ರಂದು ತೆರೆಕಾಣಲಿದೆ. ಈ ಸಿನಿಮಾದ ಆಯ್ಕೆ ಕುರಿತು ಕಂಗನಾ ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ‘ಕೆಲವು ವರ್ಷಗಳಿಂದ ನನ್ನ ಜೀವನದ ದಿಕ್ಕು ಬದಲಾಗಿದೆ. ಮಾನಸಿಕ ರೋಗಿಗಳು ಹಾಗೂ ಸೈಕೋ ಎಂಬ ಪದದ ಬಗ್ಗೆ ಸಾಕಷ್ಟು ಮೂಢನಂಬಿಕೆ ನನಗೂ ಇತ್ತು. ನನಗೂ ಈ ಪದವನ್ನು ಯಾರಾದರೂ ಬಳಸಿದಾಗ ಮುಜುಗರ ಆಗುತ್ತಿತ್ತು. ಇದೇ ರೀತಿಯ ಕತೆ ನನ್ನ ಮುಂದೆ ಬಂದಾಗ ಖುಷಿಯಾಯಿತು. ಹೊಸ ಪ್ರಯೋಗಕ್ಕೆ ಮನಸ್ಸು ಮಾಡಬೇಕು ಎನಿಸಿತು. ಈ ಸಿನಿಮಾದ ಮೂಲಕ ಸಿದ್ಧಮಾದರಿಯನ್ನು ಮುರಿಯುವ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.