ಭಾನುವಾರ, ಅಕ್ಟೋಬರ್ 24, 2021
29 °C

ನೆಟ್​ಫ್ಲಿಕ್ಸ್‌ನಲ್ಲಿ 'ತಲೈವಿ' ಸಿನಿಮಾ ಪ್ರಸಾರ –ಕಂಗನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಾಲಿವುಡ್​ ನಟಿ ಕಂಗನಾ ನಟಿಸಿರುವ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಕುರಿತಾದ ತಲೈವಿ ಸಿನಿಮಾ ನೆಟ್​ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ.

ಈ ಕುರಿತು ಕೊ ಮಾಡಿರುವ ನಟಿ ಕಂಗನಾ , ಇಂದಿನಿಂದ ನೆಟ್​ಫ್ಲಿಕ್ಸ್ ನಲ್ಲಿ ಹಿಂದಿ ಭಾಷೆಯ 'ತಲೈವಿ' ಸಿನಿಮಾ ಪ್ರಸಾರವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.

ಸೆ.10ರಂದು ‘ತಲೈವಿ’ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು. ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಈ ಸಿನಿಮಾ ತೆರೆಕಂಡಿತ್ತು.

ಈ ಸಿನಿಮಾವನ್ನು ನೆಟ್​ಫ್ಲಿಕ್ಸ್ ಮತ್ತು ಅಮೆಜಾನ್​​ ಒಟಿಟಿ ವೇದಿಕೆಗಳು ಖರೀದಿ ಮಾಡಿವೆ. ಹಿಂದಿ ಭಾಷೆ ಸಿನಿಮಾವನ್ನು ನೆಟ್​​ಫ್ಲಿಕ್ಸ್​, ತಮಿಳು ಭಾಷೆ ಸಿನಿಮಾವನ್ನು  ಅಮೆಜಾನ್​ ಖರೀದಿಸಿದೆ. ತಮಿಳು ಮತ್ತು ತೆಲುಗು ಭಾಷೆಯ ತಲೈವಿ ಸಿನಿಮಾ ಅಕ್ಟೋಬರ್‌ 8ರಂದು ಪ್ರಸಾರವಾಗಲಿದೆ.

ಅರವಿಂದ್​ ಸ್ವಾಮಿ, ನಾಸಿರ್‌​, ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.​ ವಿಜಯೇಂದ್ರ ಪ್ರಸಾದ್​ ಚಿತ್ರಕಥೆ ಬರೆದಿದ್ದು, ನಿರ್ದೇಶಕ ಎ.ಎಲ್​. ವಿಜಯ್ ಆ್ಯಕ್ಷನ್‌ ಕಟ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು