ದಳಪತಿ ವಿಜಯ್ ನಟನೆಯ 'ಜನ ನಾಯಗನ್’ ಚಿತ್ರದ ಫಸ್ಟ್ಲುಕ್ ಬಿಡುಗಡೆಯಾಗಿದ್ದು, 24 ಗಂಟೆಗಳಲ್ಲಿ 3.2 ಕೋಟಿಗೂ ಅಧಿಕ ವೀಕ್ಷಣೆ ಪಡೆದಿದೆ.

ಕೆ.ವಿ.ಎನ್ ಸಂಸ್ಥೆ ನಿರ್ಮಾಣ ಮಾಡಿರುವ ಈ ‘ಚಿತ್ರವನ್ನು ಭಾರತ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆ ಮಾಡಲು ತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. 2026ರ ಜನವರಿ 9ರಂದು ಚಿತ್ರ ತೆರೆಗೆ ಬರಲಿದೆ.

ದಳಪತಿ ವಿಜಯ್ ನಟನೆಯ 69ನೇ ಚಿತ್ರ ಇದಾಗಿದೆ. ವಿಜಯ್ ಅವರ 51ನೇ ಹುಟ್ಟುಹಬ್ಬ ಹಿನ್ನೆಲೆ ಚಿತ್ರದ ಫಸ್ಟ್ಲುಕ್ ಬಿಡುಗಡೆ ಮಾಡಲಾಗಿದೆ. ಚಿತ್ರದ ಫಸ್ಟ್ ಲುಕ್ಗೆ ಉತ್ತಮ ಪ್ರತಿಕ್ರಿಯೆ ದೊರಕಿದೆ.

ವಿಜಯ್ ಅವರ ಪೊಲೀಸ್ ಖದರ್ ಲುಕ್, ರಾಯಲ್ ಸಿಂಹಾಸನದ ಮೇಲೆ ಖಡ್ಗ ಹಿಡಿದು ಕುಳಿತಿರುವ ಮಾಸ್ ಪೋಸ್ಟರ್ ಅಭಿಮಾನಿಗಳಲ್ಲಿ ಕುತೂಹಲವನ್ನು ಮೂಡಿಸಿದೆ.

ವಿಜಯ್ ಅವರು, ಸಿನಿಮಾಗಿಂತಲೂ ರಾಜಕೀಯದ ಕಡೆ ಹೆಚ್ಚಾಗಿ ಗಮನ ಹರಿಸುತ್ತಿದ್ದು, ತಮ್ಮದೇ ಹೊಸ ಪಕ್ಷದ ಕೆಲಸ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಇವರ ಕೊನೆಯ ಚಿತ್ರವಾಗಿದೆ.

ವೆಂಕಟ್ ಕೆ.ನಾರಾಯಣ ನಿರ್ಮಾಣದ ಈ ದೊಡ್ಡ ಬಜೆಟ್ ಚಿತ್ರವನ್ನು ಎಚ್.ವಿನೋತ್ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಚಿತ್ರಗ್ರಹಣ, ಆನ್ಲ್ ಅರಸು ಸಾಹಸ, ಪ್ರದೀಪ್ ಇ. ರಾಘವ ಸಂಕಲನ, ಶೇಖರ್ ವಿ.ಜಿ., ಸುಧನ್ ನೃತ್ಯ ನಿರ್ದೇಶನವಿದೆ.
.ದಳಪತಿ ವಿಜಯ್ ನೇತೃತ್ವದ TVK ಪಕ್ಷದ ಸಿದ್ಧಾಂತದ ಬಗ್ಗೆ DMK, AIADMK ಹೇಳಿದ್ದೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.