ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಕುತೂಹಲ ತಣಿಸುವುದೇ ಸವಾಲು: ಶ್ವೇತಾ ಶ್ರೀವಾತ್ಸವ್

Last Updated 16 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಕೋವಿಡ್–19 ಕ್ವಾರೆಂಟೈನ್ ಸಮಯದಲ್ಲಿ ಮನೆಯಲ್ಲಿರುವ ಮಕ್ಕಳನ್ನುಸಂಭಾಳಿಸುವುದೇ ಕಷ್ಟ. ಮಕ್ಕಳ ಕುತೂಹಲ ತಣಿಸುವುದು ಪೋಷಕರಿಗೆ ದೊಡ್ಡ ಸವಾಲು. ಅವರ ಜಾಣ್ಮೆ, ಚುರುಕುತನ, ಓಡಾಟ–ರಂಪಾಟಗಳಿಗೆ ಮನೆಯೆಂಬ ಚೌಕಟ್ಟು ಎಂದಿಗೂ ಸಾಲುವುದಿಲ್ಲ. ಎರಡೂವರೆ ವರ್ಷದತಮ್ಮ ಚೂಟಿ ಮಗಳು ಅಶ್ಮಿತಾ ಲಾಲನೆಯಲ್ಲಿರುವ ನಟಿ ಶ್ವೇತಾ ಶ್ರೀವಾತ್ಸವ್‌ ‘ಮಕ್ಕಳೊಂದಿಗೆ ಆಡುವುದು ಸುಲಭದ ಮಾತಲ್ಲ. ಇದೊಂದು ತಪಸ್ಸು, ಬೆಟ್ಟದಷ್ಟು ತಾಳ್ಮೆ ಬೇಕು’ ಎನ್ನುತ್ತಾರೆ.

ಮನೆಯಲ್ಲಿ ಲಾಕ್‌ಡೌನ್‌ ಆಗಿರುವ ಸಮಯವನ್ನು ಸಕಾರಾತ್ಮಕವಾಗಿ ಮಕ್ಕಳೊಂದಿಗೆ ಕಳೆಯುವುದು ಸವಾಲಿನ ಕೆಲಸ. ‘ಮಕ್ಕಳನ್ನು ಟಿ.ವಿ ಮುಂದೆ ಕೂರಿಸುವುದು, ಒಬ್ಬೊಂಟಿಯಾಗಿ ಆಡಲು ಬಿಟ್ಟು ಬಿಡುವುದುಮಾಡಬಾರದು. ಅಡುಗೆ ಇರಲಿ ಮನೆಗೆಲಸ ಯಾವುದೇ ಇರಲಿ ಹೆಣ್ಣು–ಗಂಡು ವ್ಯತ್ಯಾಸ ನೋಡದೇ ಕೆಲಸಗಳಲ್ಲಿ ಅವರನ್ನು ತೊಡಗಿಸಿಳ್ಳಬೇಕು’ ಎನ್ನುತ್ತಾರೆ ಶ್ವೇತಾ.

ಮಣ್ಣಿನಲ್ಲಿ ಆಡುವುದೂ ಅಶ್ಮಿತಾಗೆ ಇಷ್ಟವಂತೆ. ಸಸಿ ಬೆಳೆಯುವ ಸೊಬಗಿನ ಪರಿಚಯವೂ ಅಶ್ಮಿತಾಗೆ ಇದೆ. ಸಣ್ಣ ವಯಸ್ಸಿನಿಂದಲ್ಲೂ ಮನೆಯ ಗಾರ್ಡ್‌ನಿಂಗ್, ಗಿಡಗಳಿಗೆ ನೀರು ಹಾಕುವುದನ್ನು ಕಲಿದ್ದಾಳೆ. ಸಣ್ಣಪುಟ್ಟ ಗಿಡಗಳ ನಿರ್ವಹಣೆ ಮಾಡುತ್ತಿರುವ ಅಶ್ಮಿತಾಗೆಮಣ್ಣಿನ ಸಹವಾಸ ಗೊತ್ತಿದೆ.

ಬಣ್ಣಬಣ್ಣದ ಚಿತ್ರವಿರುವ ಪುಸ್ತಕ ಹಿಡಿದು ಕತೆ ಕೇಳುವುದು ಅಶ್ಮಿತಾಗೆ ಇಷ್ಟದ ಆಟ. ಯಾವುದೇ ವಿಚಾರ ಅರ್ಥ ಮಾಡಿಸಬೇಕು ಎಂದರೆ ಕತೆ ಮೂಲಕ ಹೇಳುತ್ತಾರಂತೆ. ಇದು ಅವರಲ್ಲಿನ ಸಂವೇದನೆ ಹೆಚ್ಚಿಸುತ್ತದೆ. ಹಾಗೆಯೇ ಇದು ಮಕ್ಕಳು ವಸ್ತು ಮತ್ತು ವಿಷಯ ನೋಡುವ ದೃಷ್ಟಿಕೋನ ಬದಲಿಸುತ್ತದೆ ಎನ್ನುತ್ತಾರೆ ಶ್ವೇತಾ.

ಜನಪದ ಕಲೆ, ಆಟಗಳನ್ನು ನನ್ನ ಮಗಳಿಗೆ ಕಲಿಸಲು ಇಷ್ಟ ಎನ್ನುವ ಶ್ವೇತಾ, ಅಳುಗುಳಿ ಮನೆ, ಚೌಕಬಾರ, ಅಣ್ಣೆಕಲ್ಲು, ಹಾವು ಏಣಿ, ಪಗಡೆಯಂಥಜನಪದ ಆಟಗಳನ್ನು ಆಡಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT