ಫೆಬ್ರುವರಿ 1ರಿಂದ ಹೊಸದೊಂದು ರಿಯಾಲಿಟಿ ಶೋ ಆರಂಭವಾಗುತ್ತಿದೆ. ಈ ಶೋಗೆ ‘ದಿ 50’ ಎಂದು ಹೆಸರಿಡಲಾಗಿದೆ. ಮೆಲ್ನೋಟಕ್ಕೆ ‘ಬಿಗ್ ಬಾಸ್’ ಮಾದರಿಯಲ್ಲಿದೆ ಎನಿಸಿದರೂ ಹೊಸ ನಿಯಮ ಹಾಗೂ ವಿಭಿನ್ನ ಸ್ಪರ್ಧೆಗಳಿಂದ ಕೂಡಿದೆ. ಈ ರಿಯಾಲಿಟಿ ಶೋ ಮುಂಬೈನ ಅರಮನೆಯೊಳಗೆ 26 ದಿನಗಳ ಕಾಲ ನಡೆಯಲಿದೆ. ಇದರಲ್ಲಿ ವಿವಿಧ ಕ್ಷೇತ್ರಗಳ 50 ಸೆಲೆಬ್ರಿಟಿಗಳು ಸ್ಪರ್ಧಿಸುತ್ತಾರೆ.

ಬಿಗ್ ಬಾಸ್ ರಿಯಾಲಿಟಿ ಶೋನಂತೆಯೇ 'ದಿ 50' ಕೂಡ ಒಂದೇ ಸ್ಥಳದಲ್ಲಿ ನಡೆಯತ್ತದೆ. ಸೆಲೆಬ್ರೆಟಿಗಳಿಗೆ ದೈಹಿಕ, ಮಾನಸಿಕವಾಗಿ ಎದುರಿಸುವ ರೀತಿಯ ಟಾಸ್ಕ್ಗಳನ್ನು ನೀಡಲಾಗುತ್ತದೆ. ಟಾಸ್ಕ್ನಲ್ಲಿ ಗೆದ್ದವರು ಮುಂದಿನ ವಾರಕ್ಕೆ ಹೋಗುತ್ತಾರೆ. ಸೋತವರು ಎಲಿಮಿನೇಟ್ ಆಗುತ್ತಾರೆ. ಕಾರ್ಯಕ್ರಮವು ‘ಜಿಯೋ ಹಾಟ್ಸ್ಟಾರ್’ನಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ರಾತ್ರಿ 10:30ಕ್ಕೆ ‘ಕಲರ್ಸ್ ಟಿವಿ’ಯಲ್ಲಿ ಪ್ರಸಾರವಾಗಲಿದೆ.

‘ದಿ 50’ ಸ್ಪರ್ಧಿಗಳ ಪಟ್ಟಿ ಇಲ್ಲಿದೆ.

ಕರಣ್ ಪಟೇಲ್

ನಟ ‘ಕರಣ್ ಪಟೇಲ್’ ಹಿಂದಿಯ ಜನಪ್ರಿಯ ನಟರಾಗಿದ್ದಾರೆ. ಇವರು ‘ಯೇ ಹೈ ಮೊಹಬ್ಬತೇನ್’ ಎಂಬ ಧಾರಾವಾಹಿಯಲ್ಲಿ ‘ರಾಮನ್ ಭಲ್ಲಾ’ ಪಾತ್ರಕ್ಕೆ ಹೆಸರು ವಾಸಿಯಾಗಿದ್ದಾರೆ. ‘ಕಸ್ತೂರಿ’ ಮತ್ತು ‘ಕಸೌತಿ ಜಿಂದಗಿ ಕೇ 2’ ನಲ್ಲಿ ನಟಿಸಿದ್ದಾರೆ. ‘ನಚ್ ಬಲಿಯೇ’, ‘ಝಲಕ್ ದಿಖ್ಲಾ ಜಾ’ ಮತ್ತು ‘ಖತ್ರೋನ್ ಕೆ ಖಿಲಾಡಿ 10’ ನಂತಹ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದಾರೆ.

ಫೈಸಲ್ ಶೇಖ್ (ಮಿಸ್ಟರ ಫೈಸು)

ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ‘ಫೈಸಲ್ ಶೇಖ್’ 2026ರ ರಿಯಾಲಿಟಿ ಶೋ ‘ದಿ 50’ ಗೆ ಆಯ್ಕೆಯಾಗಿದ್ದಾರೆ. ‘ಖತ್ರೋನ್ ಕೆ ಖಿಲಾಡಿ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ್ದಾರೆ. ಅಪಾರ ಅಭಿಮಾನಿ ಬಳಗ ಮತ್ತು ಹಿಂದಿನ ಅನುಭವವನ್ನು ಬಳಸಿಕೊಂಡು ಫೈಸು ‘ದಿ 50’ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ದಿವ್ಯಾ ಅಗರ್ವಾಲ್

ನಟಿ ದಿವ್ಯಾ ಅಗರ್ವಾಲ್ ‘ಬಿಗ್ ಬಾಸ್ ಒಟಿಟಿ ಸೀಸನ್ 1’ರಲ್ಲಿ ಗೆದ್ದಿದ್ದರು. ‘ರಾಗಿಣಿ ಎಂಎಂಎಸ್’ ಮತ್ತು ‘ರಿಟರ್ನ್ಸ್ 2’ ವೆಬ್ ಸರಣಿಯಲ್ಲಿ ನಟಿಸಿದ್ದಾರೆ. ಇವರು ಈಗ ‘ದಿ 50’ ರಿಯಾಲಿಟಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ.

ಮೊನಾಲಿಸಾ(ಅಂತಾರಾ ಬಿಶ್ವಾಸ್)

ಬಿಗ್ ಬಾಸ್ 10ರ ಮೂಲಕ ‘ಅಂತಾರಾ ಬಿಶ್ವಾಸ್’ ‘ಮೊನಾಲಿಸಾ’ ಎಂಬ ಖ್ಯಾತಿ ಪಡೆದರು. ಹಿಂದಿಯ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ‘ನಜರ್' ಎಂಬ ಧಾರಾವಾಹಿಯಲ್ಲಿ ‘ಮೋಹನ ರಾಠೋಡ್’ ಪಾತ್ರದಲ್ಲಿ ನಟಿಸುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ನಟ ವಿಕ್ರಾಂತ್ ಸಿಂಗ್ ರಜಪೂತ್ ಅನ್ನು ವಿವಾಹವಾಗಿದ್ದಾರೆ.

ವಿಕ್ರಾಂತ್ ಸಿಂಗ್ ರಜಪೂತ್

ವಿಕ್ರಾಂತ್ ಸಿಂಗ್ ರಜಪೂತ್ ’ಭೋಜ್ಪುರಿ’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಬಿಗ್ ಬಾಸ್ ಸೀಸನ್ 10’ರ ಮೂಲಕ ರಿಯಾಲಿಟಿ ಶೋ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ರಿಯಾಲಿಟಿ ಶೋ 'ನಾಚ್ ಬಲಿಯೆ' ಸೀಸನ್ 8 ರ ಸ್ಪರ್ಧಿಯಾಗಿ ಜನಪ್ರಿಯತೆ ಪಡೆದರು. ‘ರಾಮ್ಲೀಲಾ’ ಮತ್ತು ‘ಗುಂಡೈರಾಜ್’ ಸಿನಿಮಾದಲ್ಲಿ ನಟಿಸುವ ಮೂಲಕ ಜನಪ್ರಿಯರಾಗಿದ್ದಾರೆ.

ಶೈನಿ ದೋಷಿ

ಶೈನಿ ದೋಷಿ ಹಿಂದಿಯ ಪ್ರಮುಖ ಧಾರಾವಾಹಿ ನಟಿಯಾಗಿದ್ದಾರೆ. ‘ಸರಸ್ವತಿಚಂದ್ರ‘, ‘ಜಮೈ ರಾಜಾ’ ಮತ್ತು ‘ಪಾಂಡ್ಯ ಸ್ಟೋರ್’ ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಖತ್ರೋನ್ ಕೆ ಖಿಲಾಡಿ 8’ ರ ಸ್ಪರ್ಧಿಯಾಗಿದ್ದಾರೆ.

ದುಶ್ಯಂತ್ ಕುಕ್ರೇಜಾ

ದುಷ್ಯಂತ್ ಕುಕ್ರೇಜಾ ಯೂಟ್ಯೂಬರ್ ಆಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ‘ದಿ 50’ ರಿಯಾಲಿಟಿ ಶೋನಲ್ಲಿ ಭಾಗಿಯಾಗುವ ಮೂಲಕ ಮೊದಲ ಬಾರಿಗೆ ರಿಯಾಲಿಟಿ ಶೋಗೆ ಕಾಲಿಡುತ್ತಿದ್ದಾರೆ.

ಊರ್ವಶಿ ಧೋಲಾಕಿಯಾ

ಪ್ರಸಿದ್ಧ ಟಿವಿ ತಾರೆ ‘ಊರ್ವಶಿ ಧೋಲಾಕಿಯಾ’ ಅವರು ‘ಕಸೌತಿ ಜಿಂದಗಿ ಕೇ’ ಕಾರ್ಯಕ್ರಮದ ಮೂಲಕ ‘ಕೊಮೊಲಿಕಾ’ ಎಂದೇ ಪ್ರಸಿದ್ಧರಾಗಿದ್ದಾರೆ. ಇವರು‘ ಬಿಗ್ ಬಾಸ್ 6’ರ ವಿಜೇತರಾಗಿದ್ದು, ‘ದಿ 50’ ಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ರಿಧಿ ಡೋಗ್ರಾ

ರಿಧಿ ಡೋಗ್ರಾ ಅವರು ‘ಮರ್ಯಾದಾ’, ‘ಅಸುರ್,’ ‘ಜವಾನ್’ ಮತ್ತು ‘ಟೈಗರ್ 3’ ನಂತಹ ಸಿನಿಮಾ ಮತ್ತು ಒಟಿಟಿ ಕಾರ್ಯಕ್ರಮಗಳಲ್ಲಿ ನಟಿಸಿದ್ದಾರೆ. ಇವರು ‘ನಚ್ ಬಲಿಯೆ 6’ ಮತ್ತು ‘ಖತ್ರೋನ್ ಕೆ ಖಿಲಾಡಿ 6’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.

ಶಿವ್ ಠಾಕರೆ

ಪ್ರಮುಖ ನಟರಾದ ಶಿವ್ ಠಾಕರೆ ‘ಬಿಗ್ ಬಾಸ್ ಮರಾಠಿ 2’ ನ ವಿನ್ನರ್ ಹಾಗೂ ‘ಬಿಗ್ ಬಾಸ್ 16’ ರನ್ನರ್ ಅಪ್ ಆಗಿದ್ದಾರೆ. ‘ಖತ್ರೋನ್ ಕೆ ಖಿಲಾಡಿ 13’ ರ ಸ್ಪರ್ಧಿಯಾದ ಅನುಭವ ಅವರಿಗಿದೆ. ಈಗ ‘ದಿ 50’ ನಲ್ಲಿ ಸ್ಪರ್ಧಿಯಾಗಿದ್ದಾರೆ.

ಇನ್ನುಳಿದ ಸ್ಪರ್ಧಿಗಳೆಂದರೆ

ಮನಿಶಾ ರಾಣಿ ( ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್)

ಪ್ರಿನ್ಸ್ ನರುಲಾ

ಯುವಿಕಾ ಚೌಧರಿ

ಸಿದ್ದಾರ್ಥ್ ಭಾರದ್ವಾಜ್

ಅರ್ಚನಾ ಗೌತಮ್

ಪವರ್ಲಿಫ್ಟರ್ ರಜತ್ ದಲಾಲ್

ರಿದ್ದಿಮಾ ಪಂಡಿತ್

ಸಿವೆಟ್ ತೋಮರ್

ದಿಗ್ವಿಜಯ್ ರಥೀ

ಶ್ರುತಿಕಾ ಅರ್ಜುನ್

ನಿಕ್ಕಿ ತಾಂಬೋಲಿ

ಅರ್ಬಾಜ್ ಪಟೇಲ್

ಲವ್ ಕಟಾರಿಯಾ

ಅರ್ಚಿತ್ ಕೌಶಿಕ್

ಲಕ್ಷಯ್ ಕೌಶಿಕ್

ದಿಂಪಾಲ್ ಸಿಂಗ್

ಚಾಹತ್ ಪಾಂಡೆ

ನೀಲಂ ಗಿರಿ

ಹಮೀದ್ ಬಾರ್ಕ್ಷಿ

ನೇಹಲ್ ಚುಡಾಸಮಾ

ಕೃಷ್ಣ ಶ್ರಾಫ್

ಅಮರ ಕಾಕಾ

ಡಿನೋ ಜೇಮ್ಸ್

ಸುಮೈರಾ ಶೇಖ್

ಗೇಮರ್ ವನ್ಮಾಜ್ ಸಿಂಗ್

ಸಪ್ಪಾ ಚೌಧರಿ

ಜಾಹ್ನವಿ ಕಿರಣ್ ಕಿಲ್ಲೇಕರ್

ಯುಂಗ್ ಸ್ಯಾಮಿ

ಅಫ್ಘಾನ್ ಶೇಖ್

ಬೇಬಿಕಾ ಧುರ್ವೆ

ನಟಾಲಿಯಾ ಜಾನೋಸ್ಟೆಕ್

ರಚಿತ್ ರೋಜಾ

ಫೈಜ್ ಬಲೋಚ್

ಸೌರಭ್ ಘಾಡ್ಡೆ

ಅರುಷಿ ಚಾವ್ಹಾ

ಆರ್ಯ ಜಾಧಾವೊ

ತೇಜಸ್ವಿ ಮಡಿವಾಡ

ಮ್ಯಾಕ್ಷರ್ನ್

ತೇಜಸ್ವಿ ಮಡಿವಾಡ

ಖಂಜಾದಿ

ಭವ್ಯಾ ಸಿಂಗ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.