ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಯುವರಾಜ್‌ಕುಮಾರ್‌ ಅಭಿನಯದ ಮೊದಲ ಚಿತ್ರದ ಟೈಟಲ್ ಸಾಂಗ್‌ ಬಿಡುಗಡೆ

Published 2 ಮಾರ್ಚ್ 2024, 16:48 IST
Last Updated 2 ಮಾರ್ಚ್ 2024, 16:48 IST
ಅಕ್ಷರ ಗಾತ್ರ

ಚಾಮರಾಜನಗರ: ವರನಟ ಡಾ.ರಾಜ್‌ಕುಮಾರ್‌ ಅವರ ತವರು ಚಾಮರಾಜನಗರದಲ್ಲಿ ಶನಿವಾರ ಸಂಜೆ ‘ಯುವ’ನ ಹವಾ ಮನೆ ಮಾಡಿತ್ತು. 

ರಾಘವೇಂದ್ರ ರಾಜ್‌ಕುಮಾರ್‌ ಅವರ ಎರಡನೇ ಮಗ ಯುವ ರಾಜ್‌ಕುಮಾರ್‌ ಅಭಿನಯಿಸಿರುವ ಮೊದಲ ಚಿತ್ರ, ಹೊಂಬಾಳೆ ಫಿಲ್ಮ್ಸ್‌ ನಿರ್ಮಿಸಿರುವ ಮತ್ತು ಸಂತೋಷ್‌ ಆನಂದ್‌ರಾಮ್‌ ನಿರ್ದೇಶಿಸಿರುವ ‘ಯುವ’ದ ಟೈಟಲ್‌ ಸಾಂಗ್‌ ‘ಒಬ್ಬನೇ ಶಿವ.. ಒಬ್ಬನೇ ಯುವ’ ಹಾಡು ಬಿಡುಗಡೆ ಸಮಾರಂಭ ನಗರದ ಐತಿಹಾಸಿಕ ಚಾಮರಾಜೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ನಡೆಯಿತು. 

ಜಿಲ್ಲೆಯ ಐದು ತಾಲ್ಲೂಕುಗಳಿಂದ ಬಂದಿದ್ದ, ಮಕ್ಕಳಿಂದ ಹಿಡಿದು ವೃದ್ಧವರೆಗೆ ವಿವಿಧ ವಯೋಮಾನದ ಐವರು, ಹಾಡನ್ನು ಬಿಡುಗಡೆ ಮಾಡಿದರು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಚಿತ್ರ ರಸಿಕರು, ರಾಜ್‌ಕುಮಾರ್‌, ಪುನೀತ್‌ ರಾಜ್‌ಕುಮಾರ್‌ ಅವರ ಅಭಿಮಾನಿಗಳು ಇದಕ್ಕೆ ಸಾಕ್ಷಿಯಾದರು. 

ನಾಯಕ ನಟ ಯುವ ರಾಜ್‌ಕುಮಾರ್‌, ನಿರ್ದೇಶಕ ಆನಂದ್‌ ಸಂತೋಷ್‌ ರಾಮ್‌, ಸಂಗೀತ ನಿರ್ದೇಶಕ ಅಜನೀಶ್‌ ಲೋಕನಾಥ್‌ ಸೇರಿದಂತೆ ಚಿತ್ರ ತಂಡದ ಹಲವರು ಭಾಗವಹಿಸಿದ್ದರು. 

ಹಾಡು ಬಿಡುಗಡೆಗೂ ಮುನ್ನ, ಯುವ ರಾಜ್‌ಕುಮಾರ್‌, ಚಾಮರಾಜೇಶ್ವರ ಸ್ವಾಮಿಯ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT