ಹೀಗಿದೆ ವೋಗ್ ಮ್ಯಾಗಜಿನ್ಗೆ ಅನುಷ್ಕಾ ಶರ್ಮಾ ನೀಡಿದ ಪೋಸ್!

ಬಾಲಿವುಡ್ನ ಖ್ಯಾತ ನಟಿ ಅನುಷ್ಕಾ ಶರ್ಮಾ ಹಾಗೂ ಕ್ರಿಕೆಟಿಗ ವಿರಾಟ್ ಕೊಹ್ಲಿ ಇನ್ನೇನು ಕೆಲ ದಿನಗಳಲ್ಲಿ ಅಪ್ಪ–ಅಮ್ಮ ಆಗಲಿದ್ದಾರೆ. ತುಂಬು ಗರ್ಭಿಣಿ ಅನುಷ್ಕಾ ಇತ್ತೀಚೆಗೆ ವೋಗ್ ಇಂಡಿಯಾ ಮ್ಯಾಗಜಿನ್ಗೆ ಫೋಸ್ ನೀಡಿದ್ದಾರೆ. ಈ ಫೋಟೊ ಈಗ ವೈರಲ್ ಆಗಿದೆ.
ತಾನು ಗರ್ಭವತಿಯಾದಾಗಿನಿಂದ ಇಲ್ಲಿಯವರೆಗಿನ ಪಯಣ, ಮಗುವಿನ ಕುರಿತು ತಮ್ಮ ನಿರೀಕ್ಷೆ, ಸ್ನೇಹಿತೆಯರ ಸಹಕಾರ ಈ ಎಲ್ಲಾ ವಿಷಯಗಳ ಕುರಿತು ಅನುಷ್ಕಾ ಮ್ಯಾಗಜಿನ್ ಜೊತೆ ಮಾತನಾಡಿದ್ದಾರೆ.
ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅನುಷ್ಕಾ ‘ವೋಗ್ ಇಂಡಿಯಾಗಾಗಿ ಸೆರೆ ಹಿಡಿದ ದೃಶ್ಯವಿದು, ನಿಜಕ್ಕೂ ಮಜಾವಾಗಿತ್ತು’ ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.