ಶನಿವಾರ, ಆಗಸ್ಟ್ 17, 2019
27 °C

‘ತುಘಲಕ್ ದರ್ಬಾರ್‌’ನಲ್ಲಿ ಆದಿತಿ ರಾವ್‌ ಹೈದರಿ

Published:
Updated:
Prajavani

ನಟ ವಿಜಯ್‌ ಸೇತುಪತಿ ಅವರ ಹೊಸ ತಮಿಳು ಚಿತ್ರ ‘ತುಘಲಕ್‌ ದರ್ಬಾರ್‌’ ಚಿತ್ರದಲ್ಲಿ ನಟಿ ಆದಿತಿ ರಾವ್‌ ಹೈದರಿ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದು ಪ್ರಸಾದ್‌ ದೀನದಯಾಳ್‌ ನಿರ್ದೇಶನದ ಚೊಚ್ಚಲ ಚಿತ್ರ. 

ಬೋಲ್ಡ್‌ ಪಾತ್ರ ಮತ್ತು ಮಾತುಗಳಿಗೆ ಹೆಸರಾಗಿರುವ ನಟಿ ಆದಿತಿ ರಾವ್‌ ಹೈದರಿ ಇದೇ ಮೊದಲ ಬಾರಿಗೆ ವಿಜಯ್‌ ಸೇತುಪತಿ ಜೊತೆ ಕೆಲಸ ಮಾಡುತ್ತಿದ್ದಾರೆ. ಈ ಸುದ್ದಿಯ ಬಗ್ಗೆ ಚಿತ್ರತಂಡ ಅಧಿಕೃತ ಘೋಷಣೆ ಮಾಡಿದೆ. ಈ ಚಿತ್ರಕ್ಕೆ ಗೋವಿಂದ ವಸಂತ ಸಂಗೀತ ಸಂಯೋಜನೆ ಮಾಡಲಿದ್ದಾರೆ. ರಾಜಕೀಯ ಕಥಾಹಂದರ ಹೊಂದಿರುವ ಚಿತ್ರಕ್ಕೆ ಬಾಲಾಜಿ ತಾರಾನಿತರನ್‌ ಅವರು ಸಂಭಾಷಣೆ ಬರೆಯಲಿದ್ದಾರೆ. ಸೆವೆನ್‌ ಸ್ಕ್ರೀನ್‌ ಸ್ಟುಡಿಯೊದ ಲಲಿತ್‌ ಕುಮಾರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. 

2018ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾದ ಮಣಿರತ್ನಂ ನಿರ್ದೇಶನದ ‘ಚೆಕ್ಕ ಚಿವಂತ ವಾನಂ’ ತಮಿಳು ಚಿತ್ರದಲ್ಲಿ ಅದಿತಿ ರಾವ್ ಹೈದರಿ ನಟಿಸಿದ್ದರು. ಈಗ ಮೈಸ್ಕಿನ್‌ ನಿರ್ದೇಶನದ ‘ಸೈಕೋ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಉದಯನಿಧಿ ಸ್ಟಾಲಿನ್‌ ಹಾಗೂ ನಿತ್ಯಮೆನನ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ತೆಲುಗಿನಲ್ಲಿ ನಾನಿ ನಾಯಕನಾಗಿರುವ ಚಿತ್ರವೊಂದರಲ್ಲೂ ನಟಿಸುತ್ತಿದ್ದಾರೆ.

Post Comments (+)