ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೂತು ಮಡಿಕೆ’ಯಲ್ಲಿ ಯಾಮಾರಿದೆ ಹೃದಯ

Last Updated 8 ಮೇ 2022, 11:02 IST
ಅಕ್ಷರ ಗಾತ್ರ

‘ಯಾಮಾರಿದೆ ಹೃದಯ...’ ಹೀಗೊಂದು ರೊಮ್ಯಾಂಟಿಕ್‌ ಹಾಡು ಗಾಯಕ ವಿಜಯಪ್ರಕಾಶ್‌ ಧ್ವನಿಯಲ್ಲಿ ಮೂಡಿಬಂದಿದೆ.

ಅಂದಹಾಗೆ ‘ತೂತುಮಡಿಕೆ’ ಚಿತ್ರದ ಹಾಡು ಇದು. ಮೋಷನ್ ಪೋಸ್ಟರ್ ಮೂಲಕ ಇಷ್ಟು ದಿನ ಕುತೂಹಲದ ಕೋಟೆ ಕಟ್ಟಿದ್ದ ‘ತೂತು ಮಡಿಕೆ’, ಇದೀಗ ಮಧುರವಾದ ಹಾಡನ್ನು ಬಿಡುಗಡೆ ಮಾಡಿದೆ.

ಯಾಮಾರಿದೆ ಹೃದಯ... ಹಾಡಿಗೆ ಚೇತನ್ ಕುಮಾರ್ ಸಾಹಿತ್ಯವಿದೆ. ಸ್ವಾಮಿನಾಥನ್ ಆರ್.ಕೆ. ಸಂಗೀತ ಸಂಯೋಜಿಸಿದ್ದಾರೆ. ಹಾಡಿಗೆ ಮೋಹನ್ ಮಾಸ್ಟರ್ ನೃತ್ಯ ಸಂಯೋಜಿಸಿದ್ದಾರೆ.

ಕಿರುಚಿತ್ರಗಳ ಮೂಲಕ ಬಣ್ಣದ ಲೋಕಕ್ಕೆ ಬಂದು, ‘ಮೂಕವಿಸ್ಮಿತ’, ‘ಸಿಲಿಕಾನ್ ಸಿಟಿ’, ‘ಕಿಸ್’ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಚಂದ್ರ ಕೀರ್ತಿ ಅವರು ತೂತು ಮಡಿಕೆ ಸಿನಿಮಾದಲ್ಲಿ ನಾಯಕನಾಗಿದ್ದಾರೆ. ಜೊತೆಗೆ ಸಿನಿಮಾದ ಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯೂ ಅವರದ್ದೇ. ನಾಯಕಿಯಾಗಿ ಪಾವನಾ ಗೌಡ ನಾಯಕಿ ನಟಿಸಿದ್ದಾರೆ. ಪ್ರಮೋದ್ ಶೆಟ್ಟಿ, ಉಗ್ರಂ ಮಂಜು ಮುಂತಾದ ಕಲಾಬಳಗ ಸಿನಿಮಾದಲ್ಲಿದೆ.

ಕಾಮಿಡಿ ಥ್ರಿಲ್ಲರ್ ಸಸ್ಪೆನ್ಸ್ ಕಥಾಹೂರಣದ ತೂತುಮಡಿಕೆ ಸಿನಿಮಾಗೆ ಸರ್ವತಾ ಸಿನಿ ಗ್ಯಾರೇಜ್ ಬ್ಯಾನರ್ ನಡಿ ಮಧುಸೂಧನ್ ರಾವ್ ಹಾಗೂ ಶಿವಕುಮಾರ್ ಬಂಡವಾಳ ಹೂಡಿದ್ದಾರೆ. ನವೀನ್ ಚಲ್ಲ ಛಾಯಾಗ್ರಹಣ, ಉಜ್ವಲ್ ಚಂದ್ರ ಸಂಕಲನ ಸಿನಿಮಾಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT