ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಳೆ ಟೈಗರ್‌–3 ತೆರೆಗೆ: ಚಿತ್ರದ ದೃಶ್ಯಗಳನ್ನು ಹಂಚಿಕೊಳ್ಳಬೇಡಿ– ಸಲ್ಮಾನ್‌ ಖಾನ್‌

Published 11 ನವೆಂಬರ್ 2023, 10:35 IST
Last Updated 11 ನವೆಂಬರ್ 2023, 10:35 IST
ಅಕ್ಷರ ಗಾತ್ರ

ಮುಂಬೈ: ಟೈಗರ್‌–3 ಸಿನಿಮಾ ದೀಪಾವಳಿ ಪ್ರಯುಕ್ತ ನಾಳೆ ( ಭಾನುವಾರ) ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ. ಚಿತ್ರದ ದೃಶ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ತಮ್ಮ ಅಭಿಮಾನಿಗಳಿಗೆ ನಟ ಸಲ್ಮಾನ್‌ ಖಾನ್‌ ಮನವಿ ಮಾಡಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸಲ್ಮಾನ್‌, ‘ದೀಪಾವಳಿಗೆ ಟೈಗರ್‌–3 ಚಿತ್ರವು ಅಭಿಮಾನಿಗಳಿಗೆ ಉತ್ತಮ ಉಡುಗೊರೆಯಾಗಲಿದೆ. ಇಡೀ ಟೈಗರ್‌–3 ಚಿತ್ರತಂಡ ಬಹಳ ಇಷ್ಟಪಟ್ಟು ಹಾಗೂ ಶ್ರಮವಹಿಸಿ ಸಿನಿಮಾವನ್ನು ನಿರ್ಮಿಸಿದ್ದೇವೆ. ಅಭಿಮಾನಿಗಳು ಚಿತ್ರ ವಿಕ್ಷೀಸಿದ ಬಳಿಕ ಯಾವುದೇ ವೇದಿಕೆಗಳಲ್ಲಿ ಸಿನಿಮಾದ ದೃಶ್ಯಗಳನ್ನು ಹಂಚಿಕೊಳ್ಳಬೇಡಿ. ಇದು ಚಿತ್ರ ಮಂದಿರಕ್ಕೆ ಬರುವ ಪ್ರೇಕ್ಷಕರ ಸಂಖ್ಯೆ ಮೇಲೆ ಹೊಡೆತ ಬೀಳಬಹುದು ಎಂದು ಹೇಳಿದ್ದಾರೆ.

‘ಸಿನಿಮಾದಲ್ಲಿ ಹಲವು ರೋಚಕ ದೃಶ್ಯಗಳು ಹಾಗೂ ಆಸಕ್ತಿದಾಯಕ ಸನ್ನಿವೇಶಗಳು ಇರಲಿದ್ದು, ಅಭಿಮಾನಿಗಳಿಗೆ ಉತ್ತಮ ಮನರಂಜನೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಚಿತ್ರದ ನಟಿ ಕತ್ರೀನಾ ಕೈಫ್‌‘ ಹೇಳಿದ್ದಾರೆ.

ಮನೀಶ್‌ ಶರ್ಮಾ ನಿರ್ದೇಶನದಲ್ಲಿ ಕಥೆ ಮೂಡಿ ಬಂದಿದ್ದು, ಯಶ್‌ ರಾಜ್‌ ಫೀಲಂ ಬ್ಯಾನರ್‌ನಡಿ ಚಿತ್ರ ನಿರ್ಮಿಸಲಾಗಿದೆ.

ಚಿತ್ರವು ಹಿಂದಿ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ತೆರೆ ಮೇಲೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT