ಬುಧವಾರ, ಏಪ್ರಿಲ್ 1, 2020
19 °C

ತೆಲುಗು ನಿರ್ಮಾಪಕನ ಪುತ್ರನ ಜೊತೆಗೆ ಅನುಷ್ಕಾ ಶೆಟ್ಟಿ ಮದುವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ ಪಡಸಾಲೆಯಲ್ಲಿ ಈಗ ನಟಿ ಅನುಷ್ಕಾ ಶೆಟ್ಟಿಯ ಮದುವೆಯದ್ದೇ ಬಿಸಿ ಬಿಸಿ ಚರ್ಚೆ. 38ರ ಹರೆಯದ ಆಕೆಯ ಹೃದಯಕ್ಕೆ ಲಗ್ಗೆ ಇಟ್ಟವ ಯಾರು ಎಂದು ಅಭಿಮಾನಿಗಳು ಹುಡುಕಾಟಕ್ಕೆ ಇಳಿದಿದ್ದಾರೆ. ಮೂರ್ನಾಲ್ಕು ವಾರಗಳ ಹಿಂದೆ ಉತ್ತರ ಭಾರತದ ಕ್ರಿಕೆಟರ್‌ ಜೊತೆಗೆ ಅನುಷ್ಕಾ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಕೊನೆಗೆ, ಆಕೆಯೇ ಸ್ಪಷ್ಟನೆ ನೀಡುವುದರೊಂದಿಗೆ ಈ ಸುದ್ದಿ ಹರಿದಾಡಿದಷ್ಟೇ ವೇಗದಲ್ಲಿಯೇ ತೆರೆಮರೆಗೆ ಸರಿಯಿತು. 

‘ನನ್ನ ಅಪ್ಪ–ಅಮ್ಮ ನೋಡಿದ ಹುಡುಗನನ್ನು ನಾನು ಮದುವೆಯಾಗುತ್ತಾನೆ’ ಎಂದು ಅನುಷ್ಕಾ ಖಡತ್‌ ಆಗಿ ಹೇಳಿದ್ದೂ ಆಯಿತು. ಈಗ ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರ ಪುತ್ರನ ಜೊತೆಗೆ ಆಕೆ ವೈವಾಹಿಕ ಜೀವನಕ್ಕೆ ಅಡಿ ಇಡಲಿದ್ದಾರೆ. ಆತ ತೆಲುಗು ಚಿತ್ರರಂಗದಲ್ಲಿ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಎಲ್ಲಿಯೂ ಆ ನಿರ್ದೇಶಕನ ಹೆಸರು ಬಹಿರಂಗಗೊಂಡಿಲ್ಲ.

ಅನುಷ್ಕಾ ಟಾಲಿವುಡ್‌ನಲ್ಲಿ ವೃತ್ತಿಬದುಕು ಆರಂಭಿಸಿದ್ದು ಪುರಿ ಜಗನ್ನಾಥ್‌ ನಿರ್ದೇಶನದ ‘ಸೂಪರ್‌’ ಚಿತ್ರದ ಮೂಲಕ. ಆ ನಂತರ  ಹಲವು ಸಿನಿಮಾಗಳಲ್ಲಿ ನಟಿಸಿದ ಆಕೆಗೆ ದೊಡ್ಡಮಟ್ಟದ ಹೆಸರು ತಂದುಕೊಟ್ಟಿದ್ದು ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರ. ಈ ನಡುವೆಯೇ ಹಲವು ನಟರೊಟ್ಟಿಗೆ ಆಕೆಯ ಹೆಸರು ತಳುಕು ಹಾಕಿಕೊಂಡಿತು. ಅನುಷ್ಕಾ ನಟ ಗೋಪಿಚಂದ್‌ ಅವರ ಪ್ರೇಮಪಾಶಕ್ಕೆ ಸಿಲುಕಿದ್ದಾರೆ ಎಂಬ ಸುದ್ದಿಯಿತ್ತು. ‘ಬಾಹುಬಲಿ’ಯ ಯಶಸ್ಸಿನ ಬಳಿಕ ಪ್ರಭಾಸ್‌ ಮತ್ತು ಅನುಷ್ಕಾ ನಡುವೆ ಪ್ರೇಮಾಂಕುರವಾಗಿದೆ. ಈ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಇಬ್ಬರೂ ಇದನ್ನು ಸಾರಸಗಟಾಗಿ ತಿರಸ್ಕರಿಸಿದರು. 

‘ಮೆಗಾಸ್ಟಾರ್‌’ ಚಿರಂಜೀವಿ ನಟನೆಯ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದಲ್ಲಿ ಅನುಷ್ಕಾ ಅತಿಥಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಅದಾದ ಬಳಿಕ ಹೇಮಂತ್‌ ಮಧುಕರ್‌ ನಿರ್ದೇಶನದ ಥ್ರಿಲ್ಲರ್‌ ಚಿತ್ರ ‘ನಿಶ್ಯಬ್ದಂ’ನಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರ ಏಪ್ರಿಲ್‌ 2ರಂದು ತೆರೆ ಕಾಣಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು