ಗುರುವಾರ , ಮೇ 26, 2022
24 °C

‘ಅರುಂಧತಿ’ ಚಿತ್ರಕ್ಕೆ13 ವರ್ಷ: ಜೇಜಮ್ಮ ಪಾತ್ರದ ಬಗ್ಗೆ ಅನುಷ್ಕಾ ಹೇಳಿದ್ದೇನು?

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ತೆಲುಗು ನಟಿ ಅನುಷ್ಕಾ ಶೆಟ್ಟಿ ಅಭಿನಯದ ‘ಅರುಂಧತಿ’ ಸಿನಿಮಾ ಬಿಡುಗಡೆಯಾಗಿ 13 ವರ್ಷ ಕಳೆದಿದ್ದು, ಈ ಹಿನ್ನೆಲೆಯಲ್ಲಿ ಅನುಷ್ಕಾ ಸಾಮಾಜಿಕ ಜಾಲತಾಣಗಳಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಚಿತ್ರದ ಪೋಸ್ಟರ್‌ ಹಂಚಿಕೊಂಡಿರುವ ಅವರು, ‘ಜೇಜಮ್ಮ' ಯಾವುದೇ ನಟಿಗೆ ಜೀವನದಲ್ಲಿ ಒಮ್ಮೆ ಮಾತ್ರ ಸಿಗುವ ಪಾತ್ರ ಇದಾಗಿದ್ದು, ನಾನು ಬಹಳ ಪುಣ್ಯ ಮಾಡಿದ್ದೇನೆ. ಈ ಸಿನಿಮಾ ನೀಡಿದ್ದಕ್ಕಾಗಿ ಕೋಡಿ ರಾಮಕೃಷ್ಣ, ಶ್ಯಾಮ್ ಪ್ರಸಾದ್ ರೆಡ್ಡಿ ಗುರು ಹಾಗೂ ಇಡೀ ಚಿತ್ರತಂಡಕ್ಕೆ ಧನ್ಯವಾದಗಳು. ಅದರಲ್ಲಿಯೂ ಅಭಿಮಾನಿಗಳು ನೀಡಿದ ಬೆಂಬಲ ಹಾಗೂ ಪ್ರೀತಿಗೆ ಧನ್ಯವಾದಗಳು. ಜೊತೆಗೆ ಇದು ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಸಿನಿಮಾ’ ಎಂದು ಬರೆದುಕೊಂಡಿದ್ದಾರೆ.

2009ರಲ್ಲಿ ಬಿಡುಗಡೆಯಾದ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ಅರುಂಧತಿ’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸಖತ್‌ ಸದ್ದು ಮಾಡಿತ್ತು. ಚಿತ್ರವನ್ನು ಕೋಡಿ ರಾಮಕೃಷ್ಣ ನಿರ್ದೇಶಿಸಿದ್ದು, ಶ್ಯಾಮ್ ಪ್ರಸಾದ್ ರೆಡ್ಡಿ ಅವರ ಬ್ಯಾನರ್ ಅಡಿ ಚಿತ್ರ ನಿರ್ಮಾಣವಾಗಿತ್ತು. ಸೋನು ಸೂದ್, ದೀಪಕ್, ಸಯಾಜಿ ಶಿಂಧೆ, ಮನೋರಮಾ ಮತ್ತು ಕೈಕಲಾ ಸತ್ಯನಾರಾಯಣ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಚಿತ್ರಕ್ಕೆ ಕೋಟಿ ಅವರು ಹಿನ್ನೆಲೆ ಸಂಗೀತ ಸಂಯೋಜಿಸಿದ್ದು, ಕೆ.ಕೆ ಸೆಂಥಿಲ್ ಕುಮಾರ್ ಛಾಯಾಗ್ರಹಣವಿತ್ತು.

‘ಅರುಂಧತಿ’ ಚಿತ್ರ ಅನುಷ್ಕಾ ಶೆಟ್ಟಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು