ಶುಕ್ರವಾರ, ಮೇ 27, 2022
28 °C

ಮೇ 20ಕ್ಕೆ ಒಟಿಟಿಯಲ್ಲಿ ಚಿರಂಜೀವಿ–ರಾಮ್ ಚರಣ್  ಅಭಿನಯದ ‘ಆಚಾರ್ಯ’ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ತೆಲುಗು ಮೆಗಾಸ್ಟಾರ್ ಚಿರಂಜೀವಿ –ರಾಮ್ ಚರಣ್ ನಟನೆಯ ‘ಆಚಾರ್ಯ’ ಸಿನಿಮಾ ಮೇ 20ರಂದು ಒಒಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. 

ಕೊರಟಾಲ ಶಿವ ಆ್ಯಕ್ಷನ್‌ ಕಟ್‌ ಹೇಳಿರುವ ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. 

ಏ.29ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜತೆಗೆ ಹಣ ಗಳಿಕೆ ವಿಚಾರದಲ್ಲಿ ಹಿನ್ನಡೆ ಅನುಭವಿಸಿತ್ತು. 

ಓದಿ...  IPL: ಯುವ ಆಟಗಾರರಿಗೆ ಜೆರ್ಸಿ ನೀಡಿದ ಧೋನಿ, ಅಭಿಮಾನಿಗಳ ಮನಗೆದ್ದ ಕ್ಯಾಪ್ಟನ್ ಕೂಲ್

ಆಚಾರ್ಯ ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಕೋವಿಡ್‌ ಕಾರಣದಿಂದ ಚಿತ್ರ ಬಿಡುಗಡೆಯನ್ನು ಹಲವು ತಿಂಗಳು ಮುಂದೂಡಲಾಗಿತ್ತು. 

ಚಿತ್ರದಲ್ಲಿ ಚಿರಂಜೀವಿ ಆಚಾರ್ಯ ಪಾತ್ರವನ್ನು ನಿರ್ವಹಿಸಿದರೆ, ಅವರ ಮಗ ರಾಮ್ ಚರಣ್ ಸಿದ್ಧನ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್‌ ನಟ ಸೋನು ಸೂದ್ ಖಳನಾಯಕನ ಪಾತ್ರ ಬಣ್ಣ ಹಚ್ಚಿದ್ದಾರೆ. ನಟಿ ಅನುಷ್ಕಾ ಶೆಟ್ಟಿ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಚಿತ್ರಕ್ಕೆ ಮಣಿ ಶರ್ಮಾ ಅವರು ಸಂಗೀತ ಸಂಯೋಜಿಸಿದ್ದಾರೆ. ಮ್ಯಾಟಿನಿ ಎಂಟರ್‌ಟೈನ್‌ಮೆಂಟ್ಸ್ ಮತ್ತು ಕೊನಿಡೇಲಾ ಪ್ರೊಡಕ್ಷನ್ ಕಂಪನಿ ಚಿತ್ರವನ್ನು ನಿರ್ಮಿಸಿದೆ. 

ಓದಿ...
 
Acharya Twitter Review: ಚಿರಂಜೀವಿ-ರಾಮ್ ಚರಣ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ

 ರಿಯಾಲಿಟಿ ಶೋ ಕೊರಿಯೊಗ್ರಾಫರ್ ಟೀನಾ ಸಿಧು ಅನುಮಾನಾಸ್ಪದ ಸಾವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು