ಮಂಗಳವಾರ, ಡಿಸೆಂಬರ್ 7, 2021
23 °C

ಬಾಹುಬಲಿ ಖ್ಯಾತಿಯ ರಾಜಮೌಳಿ ನಿರ್ದೇಶನದಲ್ಲಿ ಮಹೇಶ್‌ ಬಾಬು ಸಿನಿಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ತಮ್ಮ ಮುಂದಿನ ಚಿತ್ರ ಎಸ್‌.ಎಸ್‌.ರಾಜಮೌಳಿ ಅವರ ನಿರ್ದೇಶನದಲ್ಲಿ ಮೂಡಿಬರಲಿದೆ ಎಂದು ಟಾಲಿವುಡ್‌ ನಟ ಮಹೇಶ್‌ ಬಾಬು ಸ್ಪಷ್ಟಪಡಿಸಿದ್ದಾರೆ.

ಮಹೇಶ್ ಬಾಬು ಅವರ ಸಿನಿಮಾ ಎಂದರೆ ಅವರ ಅಭಿಮಾನಿಗಳು ಹೆಚ್ಚು ಕಾತುರತೆಯಿಂದ ಕಾಯುತ್ತಿರುತ್ತಾರೆ. ಅದರಲ್ಲೂ ಎಸ್.ಎಸ್. ರಾಜಮೌಳಿ ನಿರ್ದೇಶನದಲ್ಲಿ ಹೊಸ ಚಿತ್ರ ಬರಲಿದ್ದು, ಈ ಇಬ್ಬರೂ ಜೊತೆಗೂಡಿ ಚಿತ್ರ ಮಾಡುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಈ ಕುರಿತು ಮಹೇಶ್ ಬಾಬು ತಮ್ಮ ಮುಂಬರುವ ಸಿನಿಮಾದ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ‘ಅಭಿಮಾನಿಗಳೇ ನನಗೆ ದೊಡ್ಡ ಶಕ್ತಿಯಾಗಿದೆ. ವಿನಮ್ರರಾಗಿರುವುದು ನನ್ನ ಬೆಳವಣಿಗೆಗೆ ಮುಖ್ಯವಾದ ಕಾರಣ. ನಿಮಗೆ ಎಲ್ಲವೂ ತಿಳಿದಿದೆ ಎಂದು ನೀವು ಭಾವಿಸಿದರೆ, ನಿಮ್ಮ ಬೆಳವಣಿಗೆಯು ಅಲ್ಲಿಗೆ ನಿಲ್ಲುತ್ತದೆ’ ‌ಎಂದು ಮಹೇಶ್‌ ಹೇಳಿದ್ದಾರೆ.

ಬಾಲಿವುಡ್ ಪ್ರವೇಶಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಅವರು, ‘ಸರಿಯಾದ ಸಮಯದಲ್ಲಿ ಸರಿಯಾದ ಚಿತ್ರವನ್ನು ಮಾಡಲು ನಾನು ಯಾವಾಗಲೂ ಬಯಸುತ್ತೇನೆ. ಈಗ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ನನ್ನ ಮುಂದಿನ ಚಿತ್ರ ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ಅದು ಎಲ್ಲಾ ಭಾಷೆಗಳಲ್ಲಿಯೂ ತೆರೆಕಾಣಲಿದೆ’ ಎಂದು ಮಹೇಶ್ ಹೇಳಿದ್ದಾರೆ.

ಇದನ್ನೂ ಓದಿ... ನಟಿ ಶ್ರೀಲೀಲಾ ವಿಚ್ಛೇದನದ ಬಳಿಕ ಜನಿಸಿದವಳು, ಆಕೆ ನನ್ನ ಮಗಳಲ್ಲ: ಶುಭಕರ ರಾವ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು