ಬುಧವಾರ, ಜನವರಿ 22, 2020
28 °C

ಟಾಲಿವುಡ್‌ನಲ್ಲಿ ಅಲ್ಲು, ಪ್ರಿನ್ಸ್‌ ಹವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತೆಲುಗಿನ ಸ್ಟೈಲಿಶ್‌ಸ್ಟಾರ್‌ ಅಲ್ಲು ಅರ್ಜುನ್ ಅಭಿನಯದ ‘ಅಲಾ ವೈಕುಂಠಪುರಮುಲೋ’ ಮಹೇಶ್‌ ಬಾಬು ಹಾಗೂ ರಶ್ಮಿಕಾ ಮಂದಣ್ಣ ಅಭಿನಯದ ‘ಸರಿಲೇರು ನೀಕೆವ್ವರು’ ಚಿತ್ರ ಎರಡು ದಿನಗಳ ಅಂತರದಲ್ಲಿ ಈ ವಾರ ತೆರೆ ಕಾಣಲಿವೆ.

ಈ ಎರಡೂ ಚಿತ್ರಗಳ ಟ್ರೇಲರ್‌ ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿವೆ. ‘ಸರಿಲೇರು ನೀಕೆವ್ವರು’ ಚಿತ್ರದ ಟ್ರೇಲರ್ ಕೂಡ ಯುಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಇದನ್ನು 10 ಲಕ್ಷಕ್ಕೂ ಹೆಚ್ಚು ಜನರು ‌ವೀಕ್ಷಣೆ ಮಾಡಿದ್ದಾರೆ. ‘ಅಲಾ ವೈಕುಂಠಪುರಮುಲೋ’ ಚಿತ್ರದ ಟ್ರೇಲರ್‌ ಅನ್ನು 6 ಲಕ್ಷ ಜನರು ವೀಕ್ಷಿಸಿದ್ದಾರೆ. ಆ ಮೂಲಕ ಯುಟ್ಯೂಬ್‌ ಟ್ರೆಂಡಿಂಗ್‌ನಲ್ಲಿ ಎರಡನೇ ಸ್ಥಾನದಲ್ಲಿದೆ.

ಸರಿಲೇರು ನೀಕೆವ್ವರು ಚಿತ್ರ ಜ. 11ರಂದು ಮತ್ತು  ಅಲಾ ವೈಕುಂಠಪುರಮುಲೋ ಜ.12ರಂದು ಬಿಡುಗಡೆಯಾಗಲಿದೆ. ಈ ಎರಡು ಚಿತ್ರಗಳಲ್ಲಿ ನಟಿಸಿರುವ ನಾಯಕಿಯರು ಕನ್ನಡದವರು ಎಂಬುದು ವಿಶೇಷ. ‘ಮಾತಿನ ಮಾಂತ್ರಿಕ’ ಎಂದೇ ಖ್ಯಾತರಾಗಿರುವ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್‌ ಅಲಾ ವೈಕುಂಠಪುರಮುಲೋ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.


ಪೂಜಾ ಹೆಗ್ಡೆ ಹಾಗೂ ರಶ್ಮಿಕಾ ಮಂದಣ್ಣ

ಅಲ್ಲು ಅರ್ಜುನ್‌ಗೆ ನಾಯಕಿಯಾಗಿ ಕನ್ನಡದ ಪೂಜಾ ಹೆಗ್ಡೆ ನಟಿಸಿದ್ದಾರೆ. ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ ಟಬು, ವೆನ್ನೆಲ ಕಿಶೋರ್‌, ರಾಜೇಂದ್ರ ಪ್ರಸಾದ್‌, ಎನ್‌.ಪೇತುರಾಜ್‌, ಸುನೀಲ್‌, ನವದೀಪ್ ನಟಿಸಿದ್ದಾರೆ. ಅಲ್ಲು ಅರ್ಜುನ್‌ ಜೊತೆಗೂಡಿ ಜುಲಾಯಿ, ಸನ್‌ ಆಫ್‌ ಸತ್ಯಮೂರ್ತಿ ಯಂತಹ ಉತ್ತಮ ಚಿತ್ರಗಳನ್ನು ನೀಡಿದ್ದ ತ್ರಿವಿಕ್ರಮ್‌ ಈಗ ಅಲಾ ವೈಕುಂಠಪುರಮುಲೋ ಚಿತ್ರದ ಮೂಲಕ ಮತ್ತೊಂದು ಹಿಟ್ ಚಿತ್ರ ನೀಡಲು ಸಜ್ಜಾಗಿದ್ದಾರೆ.


‘ಸರಿಲೇರು ನೀಕೆವ್ವರು’ ಚಿತ್ರದಲ್ಲಿ ಮಹೇಶ್‌ ಬಾಬು

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು