ಬೆಂಗಳೂರು: ಬಹುನಿರೀಕ್ಷಿತ, ಟಾಕ್ಸಿಕ್ ಸಿನಿಮಾದ ಮೊದಲ ಅಪ್ಡೇಟ್ ಜನವರಿ 8ರಂದು ಯಶ್ ಜನ್ಮದಿನದ ಪ್ರಯುಕ್ತ ಹೊರಬರಲಿದೆ.

ಅಂದು ಚಿತ್ರದ glimpse (ಟೀಸರ್ ರೀತಿಯ ಮೊದಲ ನೋಟ) ಅಥವಾ ಚಿತ್ರದ ಟೀಸರ್ನೇ ಬಿಡುಗಡೆಯಾಗಲಿದೆ ಎನ್ನಲಾಗಿದೆ. ಇದರಿಂದ ಯಶ್ ಅಭಿಮಾನಿಗಳಿಗೆ ಖುಷಿ ವಿಚಾರ ಸಿಕ್ಕಂತಾಗಿದೆ.

ಈ ಕುರಿತು ಯಶ್ ಅವರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಟಾಕ್ಸಿಕ್ ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡು Unleashing him… ಅವನನ್ನು ಹೊರಗೆ ಬಿಡಿ ಎಂಬ ಒಕ್ಕಣಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.

‘ಕೆ.ಜಿ.ಎಫ್. ಚಾಪ್ಟರ್–2’ ಸಿನಿಮಾ ಬಳಿಕ ಯಶ್ ನಟನೆಯ ಸಿನಿಮಾ ಇದಾಗಿದ್ದು, ಮಲಯಾಳಂನ ಗೀತು ಮೋಹನ್ದಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

‘ಟಾಕ್ಸಿಕ್’ ಯಶ್ ನಟನೆಯ 19ನೇ ಸಿನಿಮಾವಾಗಿದೆ. 2023ರ ಡಿಸೆಂಬರ್ 8ರಂದು ಘೋಷಣೆಯಾಗಿದ್ದ ಈ ಚಿತ್ರದ ಚಿತ್ರೀಕರಣ ಆಗಸ್ಟ್ 8ರಂದು ಆರಂಭವಾಗಿತ್ತು. ಬೆಂಗಳೂರಿನ ಎಚ್ಎಂಟಿ ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಳಿಸಿ ಚಿತ್ರತಂಡ ಮುಂಬೈಗೆ ಹೆಜ್ಜೆ ಇಟ್ಟಿದೆ.

‘A fairy tale for grown-ups’ ಎಂಬ ಅಡಿಬರಹವಿರುವ ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಾಣ ಮಾಡುತ್ತಿದೆ. 2025ರ ಏಪ್ರಿಲ್ 10ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಈ ಹಿಂದೆ ಘೋಷಿಸಲಾಗಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.