ಸೋಮವಾರ, ಸೆಪ್ಟೆಂಬರ್ 26, 2022
22 °C

ಟ್ರೈಲರ್‌ | ಡಿಂಪಲ್– ಡಾಲಿ ‘ಮಾನ್ಸೂನ್ ರಾಗ‘: ಮಳೆ ರಾಗಗಳ ಪ್ರಣಯಗೀತೆ...

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನಟ ‘ಡಾಲಿ’ ಧನಂಜಯ್‌ ಹಾಗೂ ನಟಿ ರಚಿತಾ ರಾಮ್‌ ನಟನೆಯ ‘ಮಾನ್ಸೂನ್‌ ರಾಗ’ ಸಿನಿಮಾದ ರಿಲೀಸ್ ಟ್ರೈಲರ್ ಬುಧವಾರ ಬಿಡುಗಡೆ ಆಗಿದೆ.

ರಿಲೀಸ್ ಟ್ರೈಲರ್ ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಸಾವಿರಾರು ವೀಕ್ಷಣೆ ಕಂಡಿದೆ. ಈ ಸಿನಿಮಾ ಇದೇ ಶುಕ್ರವಾರ (ಸೆ.16)ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಸಿನಿಮಾದ ಶೇ 80ರಷ್ಟು ಭಾಗವನ್ನು ಮಳೆಯಲ್ಲಿಯೇ ಚಿತ್ರೀಕರಿಸಲಾಗಿದ್ದು, ಮಳೆಯ ಶಬ್ದ ಮತ್ತು ಸಂಗೀತದ ಅನುಭವ ನೀಡಲು ಚಿತ್ರತಂಡ ಸಿದ್ಧವಾಗಿದೆ. 

ಇದನ್ನೂ ಓದಿ: ಕ್ರಿಕೆಟಿಗ ರಿಷಬ್‌ ಪಂತ್‌ ಕ್ಷಮೆ ಕೋರಿದ ನಟಿ ಊರ್ವಶಿ ರೌಟೇಲ! ಏನಿದು ಘಟನೆ?

‘ಮಾನ್ಸೂನ್‌ ರಾಗ’ ಸಿನಿಮಾ ಮೂಲಕ ಧನಂಜಯ್‌ ಮತ್ತು ರಚಿತಾ ಮೊದಲ ಬಾರಿಗೆ ಜೋಡಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಎಸ್‌.ರವೀಂದ್ರನಾಥ್‌ ನಿರ್ದೇಶನದ ಈ ಚಿತ್ರದಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ರಚಿತಾ ಅವರು ನಟಿಸಿದ್ದಾರೆ.

ಈ ಚಿತ್ರವನ್ನು ವಿಖ್ಯಾತ್‌ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ನಟಿ ಅಮೂಲ್ಯ: ಅಭಿಮಾನಿಗಳಿಂದ ಶುಭಾಶಯಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು