ಸೋಮವಾರ, ಜುಲೈ 4, 2022
21 °C

ಹೃತಿಕ್‌ – ಸಮಂತಾ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌: ನಡೆದದ್ದು ಏನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ನಟಿ ಸಮಂತಾ ಲಾಕ್‌ವುಡ್‌ ಅವರ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್‌ ಆಗಿವೆ.

ಅಮೆರಿಕದ ಹಾಲಿವುಡ್‌ ನಟಿ ಸಮಂತಾ ಅವರು ಇತ್ತೀಚೆಗೆ ನಟ ಹೃತಿಕ್‌ ರೋಷನ್‌ ಅವರನ್ನು ಭೇಟಿ ಮಾಡಿ, ಹೃತಿಕ್‌ ಜೊತೆ ಇರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಸಮಂತಾ ಅವರು ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದು ಅದರ ಕುರಿತಾಗಿ ಹೃತಿಕ್‌ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅವರ ಭೇಟಿ ಸಿನಿಮಾಗೆ ಮಾತ್ರ ಸಂಬಂಧಿಸಿದ್ದು ಎಂದು ಹೃತಿಕ್‌ ಮ್ಯಾನೇಜರ್‌ ಕೂಡ ಹೇಳಿದ್ದಾರೆ.

READ: 

ಬಾಲಿವುಡ್‌ ಸ್ಟಾರ್‌ ನಟನನ್ನು ಭೇಟಿ ಮಾಡಿ, ಅವರೊಂದಿಗೆ ಕಾಲ ಕಳೆದಿರುವುದು ನನಗೆ ಸಂತಸ ತಂದಿದೆ ಎಂದು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಸಮಂತಾ ಹೇಳಿದ್ದಾರೆ. ಈ ಹಿಂದೆ ಸಮಂತಾ ಅವರು ಸಲ್ಮಾನ್‌ ಖಾನ್‌ ಜೊತೆ ಕಾರಿನಲ್ಲಿ ತೆರಳಿದಾಗಲೂ ಅವರ ಫೋಟೊಗಳು ಹರಿದಾಡಿದ್ದವು. 

READ: 

ಹೃತಿಕ್‌ ರೋಷನ್‌ ’ವಾರ್‌’ ಸಿನಿಮಾದ ಯಶಸ್ಸಿನ ಬಳಿಕ ಫೈಟರ್‌ ಎಂಬ ಸಿನಿಮಾ ಮಾಡುತ್ತಿದ್ದಾರೆ. ಇದು ಜನವರಿ ತಿಂಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಹೃತಿಕ್‌ಗೆ ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು