‘ದೃಶ್ಯಂ’ ಐದು ಭಾಷೆಯಲ್ಲಿ ರಿಮೇಕ್ ಆದ ಯಶಸ್ವಿ ಮಲಯಾಳ ಚಿತ್ರ. ‘ದೃಶ್ಯಂ’ ಬಳಿಕ ನಿರ್ದೇಶಕ ಜೀತು ಜೋಸೆಫ್ ಹಾಗೂ ಮೋಹನ್ಲಾಲ್ ಮತ್ತೆ ಒಂದಾಗಿದ್ದಾರೆ. ದೃಶ್ಯಂ ಚಿತ್ರದಂತೆ ಇದು ಥ್ರಿಲ್ಲರ್ ಹಾಗೂ ಸಸ್ಪೆನ್ಸ್ ಸಿನಿಮಾ ಆಗಲಿದೆ. ಚಿತ್ರದ ಹೆಸರು ಇನ್ನೂ ಅಂತಿಮಗೊಂಡಿಲ್ಲ

ವಿಶೇಷವೆಂದರೆ ತಮಿಳು ನಟಿ ತ್ರಿಶಾ ಕೃಷ್ಣನ್ ಈ ಚಿತ್ರದ ಮೂಲಕಮಾಲಿವುಡ್ಗೆ ವಾಪಸ್ಸಾಗಲಿದ್ದಾರೆ. ‘ಹೇ ಜೂಡ್’ ಚಿತ್ರದ ಬಳಿಕ ಮೋಹನ್ಲಾಲ್ ಜೊತೆಗೆ ಮಲಯಾಳ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ಶೂಟಿಂಗ್ ಡಿ.18 ರಿಂದ ಆರಂಭಗೊಳಲಿದೆ. ಚಿತ್ರೀಕರಣ ಲಂಡನ್,ಇಸ್ತಾಂಬುಲ್ ಮತ್ತು ಕೈರೋದಲ್ಲಿ ನಡೆಯಲಿದೆ. ಇದೊಂದು ಮಾಸ್ ಸಿನಿಮಾ. ಸೂಪರ್ ಸ್ಟಂಟ್ಸ್ ಬದಲು ನೈಜ ರೀತಿಯ ಫೈಟ್ ದೃಶ್ಯಗಳಲ್ಲಿ ಮೋಹನ್ಲಾಲ್ ಕಾಣಿಸಿಕೊಳ್ಳಲಿದ್ದಾರೆ. ಲೂಸಿಫರ್ನಲ್ಲಿ ಮೋಹನ್ಲಾಲ್ ಜೊತೆಗೆ ಅಭಿನಯಿಸಿದ್ದ ಇಂದ್ರಜಿತ್ ಕೂಡ ಚಿತ್ರತಂಡದ ಜೊತೆ ಕೈ ಜೋಡಿಸಿದ್ದಾರೆ.

90 ದಿನಗಳಲ್ಲಿ ಚಿತ್ರೀಕರಣ ಮುಗಿಸಬೇಕೆಂಬ ಪ್ಲಾನ್ ಹಾಕಿಕೊಂಡಿದ್ದೇವೆ. ಡಿ.16ರಂದು ಚಿತ್ರದ ಮುಹೂರ್ತ, ಅದೇ ದಿನ ಚಿತ್ರದ ಟೈಟಲ್ ಬಗ್ಗೆ ತಿಳಿಸುತ್ತೇವೆ ಎಂದು ನಿರ್ದೇಶಕಜೀತು ಜೋಸೆಫ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.