ಭೋಪಾಲ್: ಮಧ್ಯಪ್ರದೇಶದ ಕಿರುತೆರೆ ನಟಿ ವೈಶಾಲಿ ಟಕ್ಕರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
29 ವರ್ಷದ ವೈಶಾಲಿ ಪ್ಯಾನಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಬರೆದಿರುವ 10 ಪುಟಗಳ ಡೆತ್ ನೋಟ್ ಸಿಕ್ಕಿದೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆ ಸಂಬಂಧ ವೈಶಾಲಿ ಪಕ್ಕದ ಮನೆಯ ದಂಪತಿ ರಾಹುಲ್ ನವಲಾಣಿ ಹಾಗೂ ಪತ್ನಿ ದಿಶಾ ಅವರನ್ನು ಬಂಧಿಸಲಾಗಿದೆ. ರಾಹುಲ್ ದಂಪತಿ ಕಿರುಕುಳ ನೀಡುತ್ತಿದ್ದರು ಎಂದು ವೈಶಾಲಿ ಪತ್ರದಲ್ಲಿ ಹೇಳಿದ್ದಾರೆ ಎಂದು ಪೊಲೀಸ್ ಅಧಿಕಾರಿ ರೆಹಮಾನ್ ಹೇಳಿದ್ದಾರೆ.
ವೈಶಾಲಿ ಧಾರಾವಾಹಿಗಳು ಸೇರಿದಂತೆ ಹಲವು ವೆಬ್ ಸಿರೀಸ್‌ಗಳಲ್ಲಿ ನಟಿಸಿದ್ದರು.