ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಲೈಫ್‌ ಈಸ್‌ ಬ್ಯೂಟಿಫುಲ್’ ಮಂತ್ರ ಪಠಿಸಿದವರು...

Last Updated 21 ಜುಲೈ 2020, 8:36 IST
ಅಕ್ಷರ ಗಾತ್ರ
ADVERTISEMENT
""
""

ನಟರಿಗೆ ಹೋಲಿಸಿದರೆ ನಟಿಯರು ಸಿನಿಮಾ ಜಗತ್ತಿನಿಂದ ಕೊಂಚ ಬೇಗನೇ ನಿರ್ಗಮಿಸುತ್ತಾರೆ. ಹಾಗೆ ಹೋದವರಲ್ಲಿ ಕೆಲವರು ಸಾರ್ವಜನಿಕ ಸಂಪರ್ಕ ಕಳೆದುಕೊಂಡು ಸಾಮಾನ್ಯರಂತೆ ಬದುಕಲು ಇಚ್ಛಿಸಿದರೆ, ಬಹುತೇಕರು ವೈವಿಧ್ಯಮಯ ಚಟುವಟಿಕೆಗಳ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಾರೆ. ‘ಲೈಫ್‌ ಈಸ್ ಬ್ಯೂಟಿಫುಲ್’ ಎಂಬ ಮಂತ್ರ ಜಪಿಸುವ ಅವರು ಇತರರಿಗೂ ಅನುಸರಿಸುವಂತೆ ಪ್ರೇರೇಪಿಸುತ್ತಾರೆ.

ಅಂಥವರ ಸಾಲಿನಲ್ಲಿ ಟ್ವಿಂಕಲ್ ಖನ್ನಾ, ಜೂಹಿ ಚಾವ್ಲಾ, ಸೋನಾಲಿ ಬೇಂದ್ರೆ ಮುಂತಾದವರು ಪ್ರಮುಖರು. ನಟಿಯರಾಗಿ ಅಷ್ಟೇ ಅಲ್ಲ, ಅವರು ವಿವಿಧ ಕ್ಷೇತ್ರಗಳ ರಾಯಭಾರಿಗಳಾಗಿ ಹಲವರಿಗೆ ಮಾರ್ಗದರ್ಶಿ ಆಗಿದ್ದಾರೆ. ಲಾಕ್‌ಡೌನ್‌ದಂತಹ ವಾತಾವರಣದ ಮಧ್ಯೆಯೂ ಅವರು ಬದುಕು ಕಟ್ಟಿಕೊಳ್ಳಲು ಸ್ಪೂರ್ತಿಯ ಸೆಲೆಯಾಗಿದ್ದಾರೆ.

ಕೆಲವೇ ಚಿತ್ರಗಳಲ್ಲಿ ನಟಿಸಿದರೂ ಟ್ವಿಂಕಲ್ ಖನ್ನಾ ಯಾವತ್ತೂ ಹಿಟ್‌ ಮತ್ತು ಫ್ಲಾಪ್‌ ಬಗ್ಗೆ ಚಿಂತಿಸಲಿಲ್ಲ. ಖಿನ್ನತೆ ಆವರಿಸಿಕೊಳ್ಳಲು ಅವಕಾಶ ನೀಡಲಿಲ್ಲ. 2001ರಲ್ಲಿ ನಟ ಅಕ್ಷಯ್‌ ಕುಮಾರ್‌ ಅವರನ್ನುವಿವಾಹವಾದ ಬಳಿಕ ಬಾಲಿವುಡ್‌ನಿಂದ ಅಲ್ಪ ಬಿಡುವು ಪಡೆದ ಅವರು ಸಾಂಸಾರಿಕ ಚೌಕಟ್ಟು ಮತ್ತು ಒತ್ತಡಗಳ ಮಧ್ಯೆಯೂ ಪತ್ರಿಕೆಗಳಿಗೆ ನಿರಂತರ ಅಂಕಣ ಬರೆದರು. ಮಿಸೆಸ್‌ ಫನ್ನಿಬೋನ್ಸ್ (2015) ಕೃತಿ ಮತ್ತು ‘ಪೈಜಾಮಾಸ್ ಆರ್‌ ಫರ್ಗಿವಿಂಗ್‘ (2018) ಕಾದಂಬರಿ ಮೂಲಕ ಅವರು ದೇಶದಲ್ಲೇ ಆ ವರ್ಷದ ಬೆಸ್ಟ್ ಸೆಲ್ಲರ್ ಬರಹಗಾರ್ತಿಯಾಗಿ ಗುರುತಿಸಿಕೊಂಡರು. ಒಳಾಂಗಣ ವಿನ್ಯಾಸಗಾರ್ತಿಯೂ ಆಗಿರುವ ಅವರು ಆಗಾಗ್ಗೆ ಚಿತ್ರಗಳನ್ನು ನಿರ್ಮಿಸುತ್ತಾರೆ.

ಮಿಸ್‌ ಇಂಡಿಯಾ (1984) ಮತ್ತು ಬಹುಭಾಷಾ ನಟಿ ಜೂಹಿ ಚಾವ್ಲಾ ಪರಿಸರವಾದಿ ಮತ್ತು ಸಾವಯವ ಕೃಷಿಯ ಪ್ರತಿಪಾದಕಿಯೂ ಹೌದು. ಅಪ್ಪಟ ಪ್ಲಾಸ್ಟಿಕ್ ವಿರೋಧಿಯಾದ ಅವರು ಮನೆ ಮತ್ತು ಕಚೇರಿಯಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧಿಸಿದ್ದಾರೆ. ಪರಿಸರ ಕಾಳಜಿ ಮತ್ತು ಸಾಮಾಜಿಕ ಅರಿವಿನ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಅವರುಇಂದಿರಾ ಗಾಂಧಿ ಸ್ಮಾರಕ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಮೊಬೈಲ್ ಟವರ್‌ಗಳಿಂದ ಪರಿಸರದ ಮೇಲೆ ಆಗುವ ದುಷ್ಪರಿಣಾಮ ನಿಯಂತ್ರಿಲು ಆರು ವರ್ಷಗಳಿಂದ ಹೋರಾಟ ನಡೆಸಿರುವ ಅವರಿಗೆ ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಬಗ್ಗೆಯೂ ಅಷ್ಟೇ ಅಸಮಾಧಾನವಿದೆ. ಸಾವಯವ ಕೃಷಿ ಉತ್ಸವ ಆಯೋಜಿಸುವುದು ಮತ್ತು ಅದರ ಕುರಿತಾಗಿ ಜನರಲ್ಲಿ ಜಾಗೃತಿ ಮೂಡಿಸುವುದು ಅವರಿಗೆ ಇಷ್ಟ.

ನಟಿ ಜೂಹಿ ಚಾವ್ಲಾ

ಕ್ಯಾನ್ಸರ್‌ನಿಂದ ಚೇತರಿಸಿಕೊಂಡಿರುವ ಸೋನಾಲಿ ಬೇಂದ್ರೆ ಸಾವನ್ನು ಹತ್ತಿರದಿಂದ ಕಂಡವರು ಅಲ್ಲದೇ ಸವಾಲನ್ನು ನಿರ್ಭಯವಾಗಿ ಸ್ವೀಕರಿಸಿದವರು. ಸಾವಿನ ಬಾಗಿಲನ್ನು ತಟ್ಟಿ ಬಂದ ಅವರು ಪುನಃ ಅದರತ್ತ ಸುಳಿಯಲಿಲ್ಲ. ಚಿಕ್ಕಂದಿನಲ್ಲೇ ಪುಸ್ತಕಗಳ ಓದುವಿಕೆ ಮತ್ತು ಬರೆಯುವಿಕೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದ ಅವರಿಗೆ ಫಿಲಂ, ಫ್ಯಾಷನ್‌ ಕ್ಷೇತ್ರದಲ್ಲಿ ಹೆಚ್ಚು ಬಿಡುವು ಸಿಗುತ್ತಿರಲಿಲ್ಲ.

ಸೋನಾಲಿ ಬೇಂದ್ರೆ

ಆದರೆ, ಇದರ ಮಧ್ಯೆಯೂ ಅವರು ಪುಸ್ತಕ ಓದುವ ಮತ್ತು ಬರೆಯುವ ಕಾರ್ಯದಿಂದ ಅವರು ವಿಮುಖರಾಗಲಿಲ್ಲ. ‘ದಿ ಮಾಡರ್ನ್ ಗುರುಕುಲ್–ಮೈ ಎಕ್ಸಪರಿಮೆಂಟ್ಸ್‌ ವಿತ್ ಪೇರೆಂಟಿಂಗ್’ ಎಂಬ ಕೃತಿಯನ್ನು ರಚಿಸಿರುವ ಅವರು ಫೇಸ್‌ಬುಕ್‌ನಲ್ಲಿ ‘ಸೋನಾಲಿ ಬುಕ್‌ ಕ್ಲಬ್‌’ ಎಂಬ ಗ್ರೂಪ್ ಕೂಡ ನಡೆಸುತ್ತಿದ್ದಾರೆ. ಈ ಮೂಲಕ ಅವರು ಯುವಜನರಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಮೂಡಿಸುತ್ತಿದ್ದಾರೆ. ಪುಸ್ತಕ ವಾಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸ್ವತಃ ಪುಸ್ತಕಗಳನ್ನು ವಾಚಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT