ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಹೋಂ ಮಿನಿಸ್ಟರ್’ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ.

ಸುಜಯ್ ಕೆ. ಶ್ರೀಹರಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.ಈ ಸಿನಿಮಾ ಎರಡು ವರ್ಷಗಳ ಹಿಂದೆಯೇ ಸೆಟ್ಟೇರಿತ್ತು. ಉಪೇಂದ್ರಗೆ ನಾಯಕಿಯಾಗಿ ವೇದಿಕಾ ಕುಮಾರ್ ನಟಿಸಿದ್ದಾರೆ. ಇದು ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರ.‘ಹೋಂ ಮಿನಿಸ್ಟರ್’ ಎಂದರೆ ರಾಜಕಾರಣಕ್ಕೆ ಸಂಬಂಧಿಸಿದ ಕಥೆಯ ಚಿತ್ರವಿರಬಹುದೇ ಎನ್ನುವ ಕೂತೂಹಲ ಸಿನಿಪ್ರಿಯರಿಗೂ ಚಿತ್ರದ ಟೈಟಲ್ಲೇ ಹೇಳುವಂತೆ ಇದೊಂದು ಕೌಟುಂಬಿಕ ಮತ್ತು ಥ್ರಿಲ್ಲರ್ ಕಥೆಯ ಸಿನಿಮಾ ಆಗಿದೆಯಂತೆ.

ಅದ್ಧೂರಿ ತಾರಾಬಳಗದ ಈ ಚಿತ್ರದ ಚಿತ್ರೀಕರಣ ಬೆಂಗಳೂರು, ಮಲೇಷಿಯಾದಲ್ಲಿ ನಡೆದಿದೆ. ಚಿತ್ರಮಂದಿರಗಳ ಬಾಗಿಲು ತೆರೆಯಲು ಸರ್ಕಾರ ಅನುಮತಿ ನೀಡಿದ ತಕ್ಷಣ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

ಶ್ರೇಯಸ್ಸ್ ಚಿತ್ರ ಹಾಗೂ ವಾಟರ್ ಕಲರ್ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಪೂರ್ಣಚಂದ್ರ ನಾಯ್ಡು ಹಾಗೂ ಶ್ರೀಕಾಂತ್ ವಿ. ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಕುಂಜಮಣಿ ಛಾಯಾಗ್ರಹಣ,ಜಿಬ್ರಾನ್ ಸಂಗೀತ ನಿರ್ದೇಶನ, ಆಂತೋಣಿ ಅವರ ಸಂಕಲನ ಈ ಚಿತ್ರಕ್ಕಿದೆ.
ತಾನ್ಯಾ ಹೋಪ್, ಶ್ರೀನಿವಾಸಮೂರ್ತಿ, ಅವಿನಾಶ್, ಮಾಳವಿಕ ಅವಿನಾಶ್, ಸುಮನ್ ರಂಗನಾಥ್, ಸಾಧುಕೋಕಿಲ, ತಿಲಕ್, ಅಭಿಮನ್ಯು ಸಿಂಗ್, ವಿಜಯ್ ಚೆಂಡೂರ್, ಚಿದಾನಂದ್, ಬೇಬಿ ಆದ್ಯಾ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.