ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಪ್ಟೆಂಬರ್‌ನಿಂದ ‘ಆಂಡಾಳಮ್ಮ’ ಪಯಣ ಆರಂಭ

Last Updated 12 ಜುಲೈ 2021, 8:19 IST
ಅಕ್ಷರ ಗಾತ್ರ

ನಟ ಅಜಯ ರಾವ್ ಹಾಗೂ ನಟಿ ನಿಧಿ ಸುಬ್ಬಯ್ಯ ಅಭಿನಯದ ‘ಕೃಷ್ಣನ ಮ್ಯಾರೇಜ್ ಸ್ಟೋರಿ’, ನಟ ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ಹಾಗೂ ‘ಅಸ್ತಿತ್ವ’ ಚಿತ್ರಗಳನ್ನು ನಿರ್ದೇಶಿಸಿದ್ದ ನೂತನ್ ಉಮೇಶ್ ಈಗ ‘ಎ ಟೇಲ್‌ ಆಫ್‌ ಆಂಡಾಳಮ್ಮ’ ಚಿತ್ರ‌ ನಿರ್ದೇಶಿಸಲು ಮುಂದಾಗಿದ್ದಾರೆ.

‘ಶ್ರೀನಿವಾಸ ಕಲ್ಯಾಣ’, ‘ಬೀರಬಲ್’ ಹಾಗೂ ‘ಓಲ್ಡ್ ಮಾಂಕ್’ ಚಿತ್ರಗಳ ನಾಯಕ ಎಂ.ಜಿ.ಶ್ರೀನಿವಾಸ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

ಮೋಹಕ್ ಸಿನಿಮಾಸ್ ನಿರ್ಮಾಣ ಮಾಡುತ್ತಿರುವ ಈ ಚಿತ್ರ ಹಾರಾರ್ ಕಾಮಿಡಿ ಕಥಾಹಂದರ ಹೊಂದಿದೆ. ಕಾಮಿಡಿ ಜೊತೆಗೆ ಕೌಟುಂಬಿಕ ಚಿತ್ರ ಇದಾಗಿದೆ ಎನ್ನುತ್ತಾರೆ ನಿರ್ದೇಶಕರು. ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಚಿತ್ರೀಕರಣ ನಡೆಯಲಿದೆ. ಸಂಪೂರ್ಣ ಮನರಂಜನೆಯ ಈ ಚಿತ್ರದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ಅಂತಿಮ ಹಂತದಲ್ಲಿದೆ ಎಂದರು ನೂತನ್‌ ಉಮೇಶ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT