ಉಪೇಂದ್ರ ಕೈಯಲ್ಲಿ ಸಾಲು, ಸಾಲು ಚಿತ್ರಗಳಿವೆ. ‘45’ ಚಿತ್ರದ ಚಿತ್ರೀಕರಣ ಮುಗಿಸಿರುವ ಅವರು ಸದ್ಯ ರಾಮ್ ಪೋತಿನೇನಿ ಅವರ ತೆಲುಗು ಚಿತ್ರದ ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ. ತಮಿಳಿನ ‘ಕೂಲಿ’ ಚಿತ್ರ ಕೂಡ ಬಿಡುಗಡೆಗೆ ಸಿದ್ಧವಿದೆ. ಅದರ ನಡುವೆಯೂ ‘ನೆಕ್ಸ್ಟ್ ಲೆವೆಲ್’ ಸಿನಿಮಾ ಘೋಷಿಸಿದ್ದಾರೆ. ಅರವಿಂದ್ ಕೌಶಿಕ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

‘ನಮ್ ಏರಿಯಾಲ್ ಒಂದಿನ’ ಚಿತ್ರದ ಮೂಲಕ ಗುರುತಿಸಿಕೊಂಡ ನಿರ್ದೇಶಕ ಅರವಿಂದ್ ಕೌಶಿಕ್ ಕಿರುತೆರೆ, ಹಿರಿತೆರೆಯಲ್ಲಿ ಪರಿಚಿತರು. ಅವರ ಹಿಂದಿನ ಚಿತ್ರ ‘ಅರ್ದಂಬರ್ಧ ಪ್ರೇಮಕಥೆ’ ಅಷ್ಟೇನು ಯಶಸ್ಸು ಕಂಡಿರಲಿಲ್ಲ. ಬಹುತೇಕ ಹೊಸಬರೊಂದಿಗೆ ಕಂಟೆಂಟ್ ಸಿನಿಮಾಗಳನ್ನೇ ಮಾಡಿಕೊಂಡು ಬಂದಿರುವ ಇವರ ಜತೆ ಉಪೇಂದ್ರ ಕೈಜೋಡಿಸಿರುವುದು ಕುತೂಹಲ ಮೂಡಿಸಿದೆ.

ಉಪೇಂದ್ರ ಅವರ ‘ಬುದ್ಧಿವಂತ 2’ ಬಿಡುಗಡೆಗೆ ಸಿದ್ಧವಿದೆ. ನಿರ್ದೇಶಕ ನಾಗಣ್ಣ ಜತೆ ‘ಭಾರ್ಗವ’ ಮಾಡುತ್ತಿದ್ದು, ಅದರ ಚಿತ್ರೀಕರಣವೂ ಪ್ರಗತಿಯಲ್ಲಿದೆ. ‘ಕಬ್ಜ 2’ ಚಿತ್ರ ಕೂಡ ಘೋಷಣೆಗೊಂಡಿತ್ತು. ಇದರ ನಡುವೆ ತೆಲುಗಿನಲ್ಲಿ ನಿರ್ದೇಶಕ ಜಯಶಂಕರ್ ಜತೆ ಉಪೇಂದ್ರ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿಯೂ ಇದೆ.

‘ನೆಕ್ಸ್ಟ್ ಲೆವೆಲ್’ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ತರುಣ್ ಶಿವಪ್ಪ ಬಂಡವಾಳ ಹೂಡುತ್ತಿದ್ದಾರೆ. ಅವರ ತರುಣ್ ಸ್ಟುಡಿಯೋಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಆರನೇ ಚಿತ್ರವಿದು. ಹಿಂದಿ, ತೆಲುಗು, ತಮಿಳು ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ. ಉಪೇಂದ್ರ ಅವರ ‘ಎ’, ‘ಉಪೇಂದ್ರ’ ರೀತಿಯದ್ದೇ ಸಿನಿಮಾವಿದು. ಸದ್ಯ ಪ್ರೀ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ’ ಎಂದು ಚಿತ್ರತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.