ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಟಿ ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿರುವ ‘ಲಗಾಮ್’ ಚಿತ್ರದ ಚಿತ್ರೀಕರಣ ಇದೇ 26ರಿಂದ ಆರಂಭವಾಗಲಿದೆ.

ಚಿತ್ರದ ಮುಹೂರ್ತ ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನಡೆದಿದ್ದು, ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಕ್ಲ್ಯಾಪ್ ಮಾಡಿದರು. ಮಾಸ್ಕ್ ಧರಿಸಿ, ಪರಸ್ಪರ ಅಂತರ ಕಾಪಾಡಿಕೊಳ್ಳಿ ಎಂದು ನಟ ಉಪೇಂದ್ರ ಸಂದೇಶ ನೀಡುವ ದೃಶ್ಯದ ಮುಖಾಂತರವೇ ಚಿತ್ರದ ಚಿತ್ರೀಕರಣ ಆರಂಭವಾಯಿತು.

ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ, ಕೆ.ಮಾದೇಶ್, ‘ಏಪ್ರಿಲ್ 26ರಿಂದ ಚಿತ್ರೀಕರಣ ಆರಂಭಿಸಲಿದ್ದೇವೆ. ಚಿತ್ರೀಕರಣಕ್ಕೆ ನಿರ್ಬಂಧ ಬಂದರೆ, ಅದನ್ನು ಗೌರವಿಸಿ ಮೇ 30ರ ನಂತರ ಚಿತ್ರೀಕರಣ ಆರಂಭಿಸುತ್ತೇವೆ. ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಕೋವಿಡ್ ಸಮಯದಲ್ಲೇ ಆಗುವ ಚಿತ್ರವಿದು’ ಎಂದು ಮಾಹಿತಿ ನೀಡಿದರು.

ನಟ ಉಪೇಂದ್ರ ಮಾತನಾಡಿ, ‘ಸುಮಾರು ಒಂದೂವರೆ ವರ್ಷದ ಬಳಿಕ ಇಂತಹ ಮುಹೂರ್ತ ಕಾರ್ಯಕ್ರಮ ನಡೆಯುತ್ತಿದೆ. ಒಳ್ಳೆಯ ತಂತ್ರಜ್ಞರು, ಕಲಾವಿದರು ಇರುವ ಪಕ್ಕಾ ಎಂಟರ್ಟೈನ್ಮೆಂಟ್ ಚಿತ್ರ ಇದು. ಇದು ಕನ್ನಡದ ಲಗಾನ್ ಆಗಲಿ ಎಂದು ಆಶಿಸುತ್ತೇನೆ. ಚಿತ್ರದಲ್ಲಿ ನನ್ನದು ಮೂರು ಲುಕ್ ಇದೆ. ಇನ್ನೊಂದು ವಾರದಲ್ಲಿ ಇದು ಅಂತಿಮವಾಗಲಿದೆ. ‘ಕಬ್ಜ’ ಒಂದು ಪೀರಿಯಡ್ ಸಬ್ಜೆಕ್ಟ್ ಇಟ್ಟುಕೊಂಡು ಮಾಡಿದ ಸಿನಿಮಾ. ‘ಲಗಾಮ್’ ಈಗ ನಡೆಯುವ ವಿಷಯ. ಕಬ್ಜ ಚಿತ್ರೀಕರಣದ ನಡುವೆಯೇ ಇದರ ಚಿತ್ರೀಕರಣವೂ ನಡೆಯಲಿದೆ. ಕಬ್ಜ ಚಿತ್ರಕ್ಕೆ ಪ್ರತಿಯೊಂದು ಘಟನೆಗೂ ಸೆಟ್ ಹಾಕಬೇಕು, ಇದಕ್ಕೆ ಸಮಯ ಹಿಡಿಯುತ್ತದೆ. ಎಲ್ಲೆಂದರಲ್ಲಿ ಇದರ ಚಿತ್ರೀಕರಣ ಆಗಲ್ಲ. ಇದರ ನಡುವೆ ಸಿಗುವ ಸಮಯದಲ್ಲಿ ಲಗಾಮ್ ಚಿತ್ರೀಕರಣ ಮಾಡುತ್ತೇವೆ’ ಎಂದರು.

ಇದೇ ಮೊದಲ ಬಾರಿಗೆ ಉಪೇಂದ್ರ ಅವರ ಜೊತೆ ಸಿನಿಮಾದಲ್ಲಿ ನಟಿಸುತ್ತಿರುವ ಹರಿಪ್ರಿಯಾ, ‘ಈ ಹಿಂದೆ ರೆಟ್ರೊ, ಪೌರಾಣಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೆ. ಈ ಚಿತ್ರದಲ್ಲಿ ಈಗಿರುವ ಯುವತಿಯರಂತೆ ಕಾಣಿಸಿಕೊಳ್ಳಲಿದ್ದೇನೆ. ಉಪೇಂದ್ರ ಅವರ ಜೊತೆ ನಟಿಸುವ ಅವಕಾಶ ದೊರೆತಿರುವುದು ಬಹಳ ಸಂತೋಷ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.