ಶುಕ್ರವಾರ, ಸೆಪ್ಟೆಂಬರ್ 24, 2021
26 °C

‘ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ಇರುವ ವ್ಯತ್ಯಾಸ’ -ಉಪ್ಪಿ ಟ್ವೀಟ್‌ಗೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಿಯಲ್‌ ಸ್ಟಾರ್’ ಉಪೇಂದ್ರ ಅವರು ಕುಟುಂಬ ಸಮೇತ ಅಮೆರಿಕ ಪ್ರವಾಸಕೈಗೊಂಡಿದ್ದಾರೆ. ಪತ್ನಿ, ಮಕ್ಕಳೊಟ್ಟಿಗೆ ಅಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ ಫೋಟೊಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಅಂದಹಾಗೆ ಅವರು ಫೋಟೊಗಳನ್ನು ಅಪ್‌ಲೋಡ್‌ ಮಾಡಿ ಸುಮ್ಮನಿದ್ದರೆ ಸಾಮಾಜಿಕ ಜಾಲ ತಾಣಿಗರು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ವಿದೇಶ ಹಾಗೂ ಭಾರತದ ಸ್ಥಳಗಳ ಫೋಟೊ ಹಾಕಿ ಗೇಲಿ ಮಾಡುತ್ತಿರುವುದು ಹಲವರ ಕಣ್ಣನ್ನು ಕೆಂಪಾಗಿಸಿದೆ. 

ಅಮೆರಿಕದ ಸುಸಜ್ಜಿತ ರಸ್ತೆಗಳು ಮತ್ತು ಇಲ್ಲಿನ ರಸ್ತೆಯಲ್ಲಿ ಚರಂಡಿಯ ಕಲ್ಮಷ ನೀರು ಹರಿಯುತ್ತಿರುವ ಫೋಟೊ ಹಾಕಿದ್ದಾರೆ. ‘ಸಕಾರಾತ್ಮಕ ಯೋಚನೆ ಮತ್ತು ಕನಸುಗಳಿಂದ ನಮ್ಮ ದೇಶ, ರಾಜ್ಯ ಹೀಗಾಗುವುದು ಖಂಡಿತ ಸಾಧ್ಯ’ ಎಂದು ಟ್ವೀಟ್‌ ಮಾಡಿದ್ದಾರೆ.

‘ನಮ್ಮ ದೇಶಕ್ಕೂ ಬೇರೆ ದೇಶಕ್ಕೂ ಇರುವ ವ್ಯತ್ಯಾಸ... ರಾಜಕೀಯದ ಕೊಡುಗೆ...’ ಎಂದು ಬರೆದುಕೊಂಡಿದ್ದಾರೆ.

‘ಪ್ರಜಾಕೀಯ UPP ಅಂದರೆ ನಿಜವಾದ ಪ್ರಜಾಪ್ರಭುತ್ವ... ನೀವು ಹೇಳಿದಂತೆ ಕೇಳುವ ನಿಮ್ಮದೇ ಅಧಿಕಾರವಿರುವ ವ್ಯವಸ್ಥೆ... ನಮಗೆ ಕೆಲಸ ಕೊಡಿ ಎಂದು ಕೇಳಿಕೊಳ್ಳುವ ಸ್ಥಿತಿಯೇ ಇರುವುದಿಲ್ಲ... ಹಣ, ಖ್ಯಾತಿ, ಜಾತಿ ನಾಯಕರಂತೆ ಜನಪ್ರತಿನಿಧಿಗಳನ್ನು ನೋಡುವ ರಾಜಕೀಯದಿಂದ ಸಂಪೂರ್ಣವಾಗಿ ನಾವು ಬದಲಾಗಬೇಕಿದೆ’ ಉಪ್ಪಿ ಟ್ವೀಟ್‌ ಮಾಡಿದ್ದಾರೆ.

*

*

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು