ಗುರುವಾರ , ಏಪ್ರಿಲ್ 22, 2021
24 °C

ಶಶಾಂಕ್ ‘ರಣಭೂಮಿ’ಯಲ್ಲಿ ವರುಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಹಮ್ಟಿ ಶರ್ಮಾ ಕಿ ದುಲ್ಹನಿಯಾ’ ಮತ್ತು ‘ಬದ್ರಿನಾಥ್‌ ಕಿ ದುಲ್ಹನಿಯಾ’ ಸಿನಿಮಾಗಳಲ್ಲಿ ಮೋಡಿಮಾಡಿದ್ದ ಜೋಡಿ ವರುಣ್‌ ಧವನ್‌ ಹಾಗೂ ಶಶಾಂಕ್‌ ಮತ್ತೆ ಒಂದಾಗಲಿದ್ದಾರೆ.

ನಟ ವರುಣ್‌ ಧವನ್ ಹಾಗೂ ನಿರ್ದೇಶಕ ಶಶಾಂಕ್‌ ಖೈತಾನ್‌ ಜೋಡಿ ಎರಡು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಬಾಲಿವುಡ್‌ನಲ್ಲಿ ಹೆಸರು ಮಾಡಿದೆ.

ಈಗ ಸಾಹಸಮಯ ಚಿತ್ರವೊಂದರಲ್ಲಿ ಈ ಜೋಡಿ ಮತ್ತೆ ಜೊತೆಯಾಗಲಿದೆ ಎಂಬುದು ವಿಶೇಷ.

ಹೀಗೊಂದು ಸುದ್ದಿ ಬಾಲಿವುಡ್‌ ಅಂಗಳದಿಂದ ತಣ್ಣಗೆ ಬೀಸಿದೆ. ವರುಣ್ ಹಾಗೂ ಶಶಾಂಕ್ ಜೋಡಿಯ ‘ರಣಭೂಮಿ’ ಸಿನಿಮಾವೂ ಈಗಾಗಲೇ ಸೆಟ್ಟೇರಿದೆ. ಆದರೆ, ಕಾರಣಾಂತರಗಳಿಂದ ಚಿತ್ರೀಕರಣ ಮುಂದೂಡಲಾಗಿದೆ.

 ‘ಕೂಲಿ ನಂ.1’ ಸಿನಿಮಾ ತೆರೆಕಂಡ ಬಳಿಕ ವರುಣ್ ಧವನ್ ಅವರು ಶಶಾಂಕ್ ಜೊತೆಗೂಡಿ ‘ರಣಭೂಮಿ’ ಸಿನಿಮಾ ಮಾಡಲಿದ್ದಾರೆ. ಆ ಸಿನಿಮಾ  2020ರ ಜನವರಿ ಅಂತ್ಯದೊಳಗೆ ಸಿದ್ಧಗೊಳ್ಳಲಿದೆ. ಅದೊಂದು ಆ್ಯಕ್ಷನ್ ಹಾಗೂ ಅಡ್ವೆಂಚರ್ ಸಿನಿಮಾವಾಗಿರಲಿದೆ.  ವರುಣ್ ಹಾಗೂ ಶಶಾಂಕ್ ಕಾಂಬಿನೇಷನ್‌ನ ಮೂರನೇ ಸಿನಿಮಾ ಇದಾಗಲಿದೆ ಎನ್ನಲಾಗಿದ್ದು, ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

ಸಾರಾ ಅಲಿ ಖಾನ್ ಬಣ್ಣ ಹಚ್ಚಿರುವ ‘ಕೂಲಿ ನಂ.1’ ಸಿನಿಮಾದ ಚಿತ್ರೀಕರಣದಲ್ಲಿ ವರುಣ್ ಸದ್ಯ ತೊಡಗಿಕೊಂಡಿದ್ದಾರೆ. ಈ ಸಿನಿಮಾ, ನಟ ಗೋವಿಂದ್‌ ಅಭಿನಯಿಸಿದ್ದ ‘ಕೂಲಿ ನಂ. 1’ ಸಿನಿಮಾದ ರಿಮೇಕ್‌ ಆಗಿದೆ. ಇದು 2020ರ ಮೇ ತಿಂಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗಿದೆ.

ರೆಮೊ ಡಿಸೋಜಾ ಅವರ ಡಾನ್ಸ್ ಆಧಾರಿತ ಸಿನಿಮಾವಾದ ‘ಎಬಿಸಿಡಿ 3’ಯಲ್ಲೂ ವರುಣ್ ಕಾಣಿಸಿಕೊಳ್ಳಲಿದ್ದು, ಆ ಸಿನಿಮಾದ ಮಹಿಳಾ ಪ್ರಧಾನ ಪಾತ್ರದಲ್ಲಿ ನಟಿ ಶ್ರದ್ಧಾ ಕಪೂರ್ ಕಾಣಿಸಿಕೊಳ್ಳಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು