ಗುರುವಾರ , ಏಪ್ರಿಲ್ 15, 2021
29 °C

ನವೆಂಬರ್‌ನಲ್ಲಿ ವರುಣ್‌ ಮದುವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್‌ ನಟ ವರುಣ್‌ ಧವನ್‌ ನವೆಂಬರ್‌ ತಿಂಗಳಲ್ಲಿ ಹಸೆಮಣೆ ಏರಲಿದ್ದಾರೆ. ಇತ್ತೀಚೆಗೆ ವರುಣ್‌ ಮದುವೆ ವಿಚಾರ ತುಂಬಾ ಸುದ್ದಿಯಾಗುತ್ತಿದೆ. ಅವರು ಸ್ನೇಹಿತೆ ನತಾಶಾ ದಲಾಲ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಮದುವೆಗೆ ಎರಡು ಕುಟುಂಬಗಳ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದೆಲ್ಲಾ ಇತ್ತೀಚೆಗೆ ಸುದ್ದಿಗಳು ಹರಿದಾಡಿದ್ದವು. ಆದರೆ ಈ ಸುದ್ದಿಯನ್ನು ವರುಣ್ ಹಾಗೂ ಅವರ ತಂದೆ ಡೇವಿಡ್‌ ಧವನ್‌ ನಿರಾಕರಿಸಿದ್ದರು. 

ಈಗ ಮತ್ತೊಮ್ಮೆ ವರುಣ್‌ ಮದುವೆ ವಿಚಾರ ಸಾಮಾಜಿಕ ಜಾಲತಾಣಗಳ ಮೂಲಕ ಸುದ್ದಿಯಾಗುತ್ತಿದ್ದು, ವರುಣ್‌ ನವೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎಂದು ಅವರ ಸ್ನೇಹಿತರು ಹೇಳಿದ್ದಾರೆ. 

‘ನವೆಂಬರ್‌ನಲ್ಲಿ ನತಾಶಾ ಹಾಗೂ ವರುಣ್‌ ಮದುವೆಯಾಗುತ್ತಿರುವುದು ಖಚಿತ. ಎರಡು ಕುಟುಂಬಗಳು ಮದುವೆ ತಯಾರಿಯಲ್ಲಿದೆ. ಮದುವೆಗಾಗಿ ನತಾಶಾ ಹಾಗೂ ವರುಣ್‌ ಅಮ್ಮ ಇಬ್ಬರೂ ತಿಂಗಳಿನಿಂದ ಶಾಪಿಂಗ್‌ ಮಾಡುತ್ತಿದ್ದಾರೆ’ ಎಂದು ವರುಣ್‌ನ ಆಪ್ತ ಸ್ನೇಹಿತರೊಬ್ಬರು ಹೇಳಿದ್ದಾರೆ. 

ಆದರೆ ಮದುವೆ ದಿನಾಂಕ ಹಾಗೂ ಸ್ಥಳದ ಬಗ್ಗೆ ಯಾವ ಮಾಹಿತಿಯೂ ನೀಡಿಲ್ಲ. ವಿದೇಶದಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ. ಬಂಧು ಬಳಗ ಹಾಗೂ ಆಪ್ತ ಸ್ನೇಹಿತರಷ್ಟೇ ಭಾಗವಹಿಸಲಿದ್ದಾರೆ. ಮುಂಬೈನಲ್ಲಿ ಅದ್ದೂರಿ ರಿಸೆಷ್ಪನ್‌ ನಡೆಯಲಿದೆ ಎಂದು ಸ್ನೇಹಿತರು ಹೇಳಿದ್ದಾರೆ. ಸದ್ಯ ವರುಣ್‌ ‘ಕೂಲಿ ನಂ.1’ ರಿಮೇಕ್‌ ಚಿತ್ರದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು