ಬುಧವಾರ, ನವೆಂಬರ್ 25, 2020
25 °C

ʻವಸಂತ ಕೋಕಿಲʼ ಫಸ್ಟ್‌ ಲುಕ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಬಿ ಸಿಂಹ (ಜಯಸಿಂಹ) ಅಭಿನಯದ ʻವಸಂತ ಕೋಕಿಲʻ ಕನ್ನಡ ಸಿನಿಮಾದ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. 

ಬಾಬಿ ಸಿಂಹರ ಜನ್ಮದಿನದಂದು (ನ. 6) ಈ ಫಸ್ಟ್‌ ಲುಕ್‌ ಬಿಡುಗಡೆಯಾಗಿದೆ. ನಟ ರಕ್ಷಿತ್‌ ಶೆಟ್ಟಿ ಟ್ವಿಟರ್‌ ಖಾತೆ ಮೂಲಕ ಫಸ್ಟ್‌ಲುಕ್‌ ಬಿಡುಗಡೆ ಮಾಡಿದರು.  

ಎಸ್‌ಆರ್‌ಟಿ ಎಂಟರ್‌ಟೈನ್‌ಮೆಂಟ್ಸ್‌, ಮುದ್ರಾ ಫಿಲ್ಮ್‌ ಫ್ಯಾಕ್ಟರಿ ಬ್ಯಾನರ್‌ ಜಂಟಿಯಾಗಿ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿಈ ಚಿತ್ರ ಬಿಡುಗಡೆಯಾಗುತ್ತಿದೆ. ರಾಮ್‌ ತಳ್ಲೂರಿ ಚಿತ್ರದ ನಿರ್ಮಾಪಕರು. ರಮಣನ್‌ ಪುರುಷೋತ್ತಮ ನಿರ್ದೇಶನವಿದೆ. ನಾಯಕಿಯಾಗಿ ಕಾಶ್ಮೀರ ಪರ್ದೇಶಿ ಅಭಿನಯಿಸುತ್ತಿದ್ದಾರೆ.

ತೆಲುಗು ಭಾಷೆಯ ಫಸ್ಟ್‌ಲುಕ್‌ನ್ನು ‘ಬಾಹುಬಲಿ’ ಖ್ಯಾತಿಯ ರಾಣಾ ಹಾಗೂ ತಮಿಳು ಭಾಷೆಯ ಫಸ್ಟ್‌ಲುಕ್‌ ಪೋಸ್ಟರ್‌ನ್ನ ಖ್ಯಾತ ನಟ ಧನುಷ್‌ ಆನ್‌ಲೈನ್‌ ಮೂಲಕ ಬಿಡುಗಡೆ ಮಾಡಿದರು. ರೊಮ್ಯಾಂಟಿಕ್‌‌ ಥ್ರಿಲ್ಲರ್‌ ಎಳೆಯಲ್ಲಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ. ಥಿಂಕ್‌ ಮ್ಯೂಸಿಕ್‌ ಈ ಚಿತ್ರದ ಆಡಿಯೋ ಹಕ್ಕುಗಳನ್ನ ಹೊಂದಿದೆ ಎಂದು ನಿರ್ಮಾಪಕ ರಾಮ್‌ ತಳ್ಲೂರಿ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.