ಮುಂಬೈ: ಖ್ಯಾತ ಬಾಲಿವುಡ್ ನಿರ್ಮಾಪಕ ಅನಿಲ್ ಸೂರಿ (77) ಗುರುವಾರ ಕೊರೊನಾ ವೈರಸ್ ಸೋಂಕಿನಿಂದ ನಿಧನರಾಗಿದ್ದಾರೆ.

'ಕರ್ಮಯೋಗಿ' ಮತ್ತು 'ರಾಜ್ ತಿಲಕ್'ನಂತಹ ಹೆಸರಾಂತ ಚಿತ್ರಗಳನ್ನು ಅನಿಲ್ ಸೂರಿ ನಿರ್ಮಾಣ ಮಾಡಿದ್ದರು.

ಅವರ ಸಹೋದರ, ಚಲನಚಿತ್ರ ನಿರ್ಮಾಪಕ ರಾಜೀವ್ ಸೂರಿ, 'ಅನಿಲ್ ಸೂರಿ ಅವರು ಜೂನ್ 2 ರಂದು ಜ್ವರದಿಂದ ಬಳಲುತ್ತಿದ್ದರು. ಮರುದಿನ ಉಸಿರಾಟದ ತೊಂದರೆ ಕಾಣಿಸಿಕೊಂಡು ಆರೋಗ್ಯ ಸಂಪೂರ್ಣ ಹದಗೆಟ್ಟಿತ್ತು' ಎಂದು ತಿಳಿಸಿದ್ದಾರೆ.

'ಅವರನ್ನು ಲೀಲಾವತಿ ಮತ್ತು ಹಿಂದೂಜಾ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಆದರೆ, ಎರಡೂ ಆಸ್ಪತ್ರೆಗಳಲ್ಲಿ ಅನಿಲ್ ಸೂರಿಯವರ ಚಿಕಿತ್ಸೆಗೆ ಒಪ್ಪಲಿಲ್ಲ. ನಂತರ ಅವರನ್ನು ಬುಧವಾರ ರಾತ್ರಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಅವರಿಗೆ ಕೋವಿಡ್-19 ಇರುವುದು ಖಚಿತವಾಯಿತು. ಗುರುವಾರ ಸಂಜೆ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಯಿತು. ಅವರು ಅದೇ ಸಂಜೆ 7 ಗಂಟೆ ಸುಮಾರಿಗೆ ನಿಧನರಾದರು' ಎಂದು ರಾಜೀವ್ ತಿಳಿಸಿದ್ದಾರೆ.

ಅನಿಲ್ ಅವರಿಗೆ ಇಬ್ಬರು ಮಕ್ಕಳು ಮತ್ತು ಪತ್ನಿ ಇದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.