ಮುಂಬೈ: ಬಾಲಿವುಡ್ ಸಂಗೀತ ನಿರ್ದೇಶಕರಾಮ್ ಲಕ್ಷ್ಮಣ್ ಹೃದಯಾಘಾತದಿಂದ ಶನಿವಾರ ನಿಧನರಾದರು. ಅವರಿಗೆ 78 ವರ್ಷ ವಯಸ್ಸಾಗಿತ್ತು.

ನಾಗಪುರದಲ್ಲಿರುವ ನಿವಾಸದಲ್ಲಿ ಶನಿವಾರ ಮುಂಜಾನೆ ನಿಧನರಾದರು ಎಂದು ಅವರ ಪುತ್ರ ಅಮರ್ ಪಾಟೀಲ್ ತಿಳಿಸಿದ್ದಾರೆ.

ಕಳೆದ ವಾರ ಅವರಿಗೆ ಕೋವಿಶೀಲ್ಡ್ 2ನೇ ಲಸಿಕೆ ನೀಡಲಾಗಿತ್ತು. ಆ ಸಂದರ್ಭದಲ್ಲಿ ಅವರು ಆರೋಗ್ಯವಾಗಿದ್ದರು. ಶುಕ್ರವಾರ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿತ್ತು. ವೈದ್ಯರು ಮನೆಯಲ್ಲೇ ಚಿಕಿತ್ಸೆ ನೀಡಿದ್ದರು ಎಂದು ಅಮರ್ ಪಾಟೀಲ್ ತಿಳಿಸಿದ್ದಾರೆ.

ರಾಮಲಕ್ಷ್ಮಣ್ ರ ಮೂಲ ಹೆಸರು ವಿಜಯ್ ಪಾಟೀಲ್. ತಮ್ಮ ಗೆಳೆಯ ಸುರೇಂದರ್ ಜೊತೆಗೂಡಿ 1975ರಲ್ಲಿ ಸಂಗೀತ ಸಂಯೋಜನೆ ಪ್ರಾರಂಭಿಸಿದರು. ಸುರೇಂದರ್ ಅವರು ರಾಮ್ ಆಗಿ, ವಿಜಯ್ ಪಾಟೀಲ್ ಲಕ್ಷ್ಮಣ್ ಆಗಿ ಸಂಗೀತಯಾನ ಆರಂಭಿಸಿದರು. ಆದರೆ ದುರದೃಷ್ಟವಶಾತ್ ಸುರೇಂದರ್ 1976ರಲ್ಲಿ ನಿಧನರಾಗಿದ್ದು ಮುಂದೆ ವಿಜಯ್ ಅವರು ರಾಮಲಕ್ಷ್ಮಣ್ ಹೆಸರಿನ ಮೂಲಕವೇ ಸಂಗೀತ ಯಾತ್ರೆ ಮುಂದುವರೆಸಿದರು.

ಹಮ್ ಆಪ್ಕೆ ಹೈನ್ ಕೌನ್ ಮತ್ತು ಮೈನೆ ಪ್ಯಾರ್ ಕಿಯಾ ಸೇರಿದಂತೆ ಹಲವು ಜನಪ್ರಿಯ ಹಿಂದಿ ಸಿನಿಮಾಗಳಿಗೆ ಲಕ್ಷ್ಮಣ್‌ಸಂಗೀತ ಸಂಯೋಜನೆ ಮಾಡಿದ್ದರು.ಬಾಲಿವುಡ್‌ನ ಹಿರಿಯ ನಟರು, ನಿರ್ದೇಶಕರು, ನಿರ್ಮಾಪಕರು ಸೇರಿದಂತೆ ತಂತ್ರಜ್ಞರು ರಾಮ್ ಲಕ್ಷ್ಮಣ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.